ಭಾನುವಾರ, ಏಪ್ರಿಲ್ 18, 2021
33 °C

ಇಮ್ರಾನ್‌ಖಾನ್‌ಗೆ ತಾಲಿಬಾನ್‌ಗಳ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾವಲ್ (ಎಪಿ):  ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ- ಇನ್ಸಾಫ್ ಪಕ್ಷದ ಅಧ್ಯಕ್ಷ  ಇಮ್ರಾನ್ ಖಾನ್ ಅವರನ್ನು  ಹತ್ಯೆ ಮಾಡುವುದಾಗಿ ತಾಲಿಬಾನ್‌ಗಳು  ಬೆದರಿಕೆ ಒಡ್ಡಿದ್ದಾರೆ.

ಅಮೆರಿಕದ  ಡ್ರೋಣ್ ದಾಳಿಯ ವಿರುದ್ಧ ತಾಲಿಬಾನ್ ಉಗ್ರರ ಪ್ರಬಲ ತಾಣವಾದ ವಜೀರಿಸ್ತಾನದ ಬುಡಕಟ್ಟು ಪ್ರಾಂತ್ಯಗಳಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಳ್ಳುವುದಾಗಿ ಇಮ್ರಾನ್ ಹೇಳಿದ್ದರು.

ಇಮ್ರಾನ್ ತಮ್ಮನ್ನು ತಾವು ಸುಧಾರಣಾವಾದಿ ಎಂದು ಕರೆದು ಕೊಂಡಿದ್ದಾರೆ. ಅದು ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿರುವುದರಿಂದ ಅವರ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ತಾಲಿಬಾನ್ ವಕ್ತಾರ ಅಸನ್‌ಉಲ್ಲಾ ಅಸನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.