ಇಮ್ರಾನ್ ನೇತೃತ್ವದಲ್ಲಿ ಶಾಂತಿ ಮೆರವಣಿಗೆ

7

ಇಮ್ರಾನ್ ನೇತೃತ್ವದಲ್ಲಿ ಶಾಂತಿ ಮೆರವಣಿಗೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ದಕ್ಷಿಣ ವಾಜಿರಿಸ್ತಾನದ ಮೇಲೆ ಅಮೆರಿಕ ಪದೇಪದೇ ನಡೆಸುತ್ತಿರುವ ಡ್ರೋಣ್ ದಾಳಿ ವಿರೋಧಿಸಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದಲ್ಲಿ ನೂರಾರು ಜನರು ವಾಹನ ಮೆರವಣಿಗೆ ಆರಂಭಿಸಿದರು.ಇಸ್ಲಾಮಾಬಾದ್‌ನಿಂದ ದಕ್ಷಿಣ ವಾಜಿರಿಸ್ತಾನಕ್ಕೆ ಹೊರಟಿರುವ 130 ವಾಹನಗಳ ಶಾಂತಿ ಮೆರವಣಿಗೆಯಲ್ಲಿ ಮಾಜಿ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಸೇರಿದಂತೆ ತೆಹರಿಕ್-ಎ- ಇನ್ಸಾಫ್ ಪಕ್ಷದ ಅನೇಕ ಮುಖಂಡರು ಪಾಲೆಂಡಿದ್ದಾರೆ. `ನಮ್ಮ ಈ ಶಾಂತಿ ಮೆರವಣಿಗೆಗೆ ತಾಲಿಬಾನ್ ಉಗ್ರರು ಯಾವುದೇ ಬೆದರಿಕೆ ಹಾಕಿಲ್ಲ. ಆದರೆ ಸರ್ಕಾರ ಉಗ್ರರ ಸಂಭಾವ್ಯ ದಾಳಿ ನೆಪವೊಡ್ಡಿ ಮೆರವಣಿಗೆ ನಿಲ್ಲಿಸಲು ಯತ್ನಿಸುತ್ತಿದೆ~ ಎಂದು ಖಾನ್ ಆಪಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry