ಇಮ್ರಾನ್ ಹಶ್ಮಿ ಗೆ ತೆರೆದ ಅದೃಷ್ಟದ ಬಾಗಿಲು

7

ಇಮ್ರಾನ್ ಹಶ್ಮಿ ಗೆ ತೆರೆದ ಅದೃಷ್ಟದ ಬಾಗಿಲು

Published:
Updated:
ಇಮ್ರಾನ್ ಹಶ್ಮಿ ಗೆ ತೆರೆದ ಅದೃಷ್ಟದ ಬಾಗಿಲು

ಇಮ್ರಾನ್ ಹಶ್ಮಿ ಅಂದ್ರೆ ಸಾಕು ಮಹೇಶ್ ಭಟ್ ಪ್ರೊಡಕ್ಷನ್ ಎಂಬಂತೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಇಮ್ರಾನ್‌ಗೆ ಕರಣ್ ಜೋಹರ್ ಹಾಗೂ ಯಶ್ ಚೋಪ್ರಾ ಅವಕಾಶ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲೆಗ ಗುಟ್ಟಾಗಿ ಉಳಿದಿಲ್ಲ.“ನಾನು ಯಾವತ್ತೂ ಒಂದೇ ತರಹದ ಪಾತ್ರಗಳಿಗೆ ಅಂಟಿಕೊಂಡಿಲ್ಲ. ಹಾಗೆಯೇ ನನ್ನ ಹೆಸರಿನ ಮುಂದೊಂದು ಬ್ರಾಕೆಟ್ ಸೃಷ್ಟಿಯಾಗದಂತೆ ಎಚ್ಚರ ವಹಿಸಿದ್ದೇನೆ. ಕೇವಲ ಶೃಂಗಾರ ಪಾತ್ರ, ಕೇವಲ ಕಡಿಮೆ ಬಜೆಟ್‌ನ ಚಿತ್ರ ಅಥವಾ ಸಂಗೀತಮಯ ಚಿತ್ರ ಹೀಗೆ ಯಾವುದಕ್ಕೂ ಅಂಟಿಕೊಂಡಿಲ್ಲ. `ಒನ್ಸ್ ಅಪಾನ್ ಅ ಟೈಮ್ ಇನ್ ಮುಂಬೈ~, ಜನ್ನತ್ -2, `ಡರ್ಟಿ ಪಿಕ್ಚರ್~ ಮುಂತಾದ ಚಿತ್ರಗಳು ಈ ಮಾತನ್ನು ಸಾಬೀತು ಪಡಿಸಿಲ್ಲವೇ” ಎಂದು ಪ್ರಶ್ನಿಸುತ್ತಾರೆ.ಕರಣ್ ಜೋಹರ್ ಮತ್ತು ಯಶ್ ಚೋಪ್ರಾ ಪ್ರಸ್ತಾಪಗಳ ಬಗ್ಗೆ ಕೇಳಿದರೆ, `ಈ ಬಗ್ಗೆ ನಾನು ಹೇಳುವುದೇನೂ ಉಳಿದಿಲ್ಲ. ಆ ಪ್ರೊಡಕ್ಷನ್‌ಗಳ ಬಗ್ಗೆ ಅದಮ್ಯ ಗೌರವವಿದೆ. ಮಾತುಕತೆಗಳಾಗುತ್ತಿರುವುದು ನಿಜ. ಎಲ್ಲವೂ ಸರಿ ಹೋದರೆ ಈ ಬಗ್ಗೆ ಧರ್ಮಾತ್ಮಾ ಹಾಗೂ ಯಶ್‌ರಾಜ್ ಫಿಲ್ಮ್ಸ್‌ನ ನಿರ್ಮಾಪಕರು ಘೋಷಿಸುತ್ತಾರೆ~ ಎಂದು ಜಾಣತನದಿಂದ ಹೇಳುತ್ತಾರೆ ಹಶ್ಮಿ.ಅವರ ಚಿತ್ರಗಳಲ್ಲಿ ಎಂಥ ಪಾತ್ರಗಳು ಸಿಗಬಹುದು ಎಂದು ಕೆಣಕಿದಾಗಲೂ ಈವರೆಗೂ ತಮಗಿಷ್ಟವಾಗುವ, ತಾವು ನ್ಯಾಯ ಸಲ್ಲಿಸಬಹುದು ಎಂದೆನಿಸಿದ ಪಾತ್ರಗಳನ್ನು ಮಾತ್ರ ಒಪ್ಪಿಕೊಂಡಿರುವುದಾಗಿ ಅವರು ಪ್ರತಿಕ್ರಿಯಿಸುತ್ತಾರೆ. ಬ್ಯಾನರ್ ಯಾವುದೇ ಆಗಲೀ ಪಾತ್ರ ಇಷ್ಟವಾದರೆ ಮಾತ್ರ ಒಪ್ಪಂದ ಎಂಬುದು ಅವರ ತೀರ್ಮಾನ.`ಯಶ್‌ರಾಜ್ ಸಿನಿಮಾವನ್ನು ಪಾತ್ರ ಒಪ್ಪದೇ ತಿರಸ್ಕರಿಸಿದ್ದೀರಂತೆ~ ಎಂಬ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ಸಿದ್ಧ ಪಡಿಸಿಕೊಂಡಿದ್ದಾರೆ. ಈ ಉತ್ತರ ಹೀಗಿದೆ: `ನಾನು ಸಹಿ ಮಾಡಿದ ಚಿತ್ರಗಳ ಬಗ್ಗೆ ಮಾತ್ರ ಮಾತನಾಡಬಲ್ಲೆ. ಉಳಿದ ಪ್ರಶ್ನೆಗಳ ಬಗ್ಗೆ ಚರ್ಚೆ ಬೇಡ~.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry