ಶುಕ್ರವಾರ, ಮೇ 14, 2021
32 °C

ಇರಾಕ್‌ನಲ್ಲಿ ಬಾಂಬ್ ಆರ್ಭಟ: 37 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್ (ಎಎಫ್‌ಪಿ): ಇರಾಕ್‌ನ ಆರು ಪ್ರದೇಶಗಳಲ್ಲಿ ಗುರುವಾರ ನಡೆದ ಬಾಂಬ್ ಹಾಗೂ ಗುಂಡಿನ ದಾಳಿಯಲ್ಲಿ ಕನಿಷ್ಠ 37 ಮಂದಿ ಹತರಾಗಿದ್ದು, 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಆಲ್ ಖೈದಾ ಪರ ಸಂಘಟನೆಗಳು ಮಾರ್ಚ್ 20 ರಂದು ನಡೆಸಿದ ದಾಳಿಯಲ್ಲಿ 50 ಮಂದಿ ಮೃತಪಟ್ಟು 255ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅದಾದ ನಂತರ ಇರಾಕ್ ಎದುರಿಸಿದ ಭೀಕರ ದಾಳಿಗಳು ಇವಾಗಿವೆ.ದಾಳಿ ಹಿನ್ನೆಲೆಯಲ್ಲಿ ರಾಜಕೀಯ ಒತ್ತಡಗಳು ಹೆಚ್ಚಿರುವ ಬೆನ್ನಲ್ಲೇ, ರಕ್ಷಣಾ ನ್ಯೂನತೆ ಈ ದಾಳಿಗೆ ಕಾರಣ ಹಾಗೂ ಸೇನಾಪಡೆ ಮುಖ್ಯಸ್ಥರಾಗಿರುವ ಪ್ರಧಾನಿ ನೂರಿ ಅಲ್ ಮಲ್ಲಿಕಿ ದಾಳಿಯ ಹೊಣೆ ಹೊತ್ತುಕೊಳ್ಳಬೇಕು ಎಂದು ಸುನ್ನಿ ಬೆಂಬಲಿತ ಸಂಘಟನೆಗಳು ಒತ್ತಾಯಿಸಿವೆ. 22 ನಾಗರಿಕರು, 10 ಪೊಲೀಸರು, ಅಲ್‌ಖೈದಾ ವಿರೋಧಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.