ಇರಾಕ್‌ನಲ್ಲಿ ಸರಣಿ ಬಾಂಬ್ ಸ್ಫೋಟ: 50 ಸಾವು

7

ಇರಾಕ್‌ನಲ್ಲಿ ಸರಣಿ ಬಾಂಬ್ ಸ್ಫೋಟ: 50 ಸಾವು

Published:
Updated:

ಬಾಗ್ದಾದ್(ಎಎಫ್‌ಪಿ): ಇರಾಕ್‌ನ ರಾಜಧಾನಿ ಬಾಗ್ದಾದ್‌ನ ವಿವಿಧಡೆ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಸತ್ತು, 250  ಜನರು ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆ ಹಾಗೂ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬಾಗ್ದಾದ್, ಬಬ್ಲಿ ಪ್ರಾಂತ್ಯದ ದಕ್ಷಿಣ ಭಾಗದ ವಿವಿಧ ಪ್ರದೇಶಗಳು, ಸುನ್ನಿ ಸಮುದಾಯದವರು ಹೆಚ್ಚು ಸಂಖ್ಯೆಯಲ್ಲಿರುವ ದಿಯಾಲಾ ಮತ್ತು ಸಾಲಾಹಿದ್ದಿನ್ ಉತ್ತರ ಭಾಗ, ಕುರ್ದಿಸ್ತಾನದ ವಲಯದ ಸ್ವಾಯತ್ತ ಪ್ರದೇಶ ಕಿರ್ಕುಕ್‌ನಲ್ಲಿಯೂ ಸ್ಫೋಟಗಳು ಸಂಭವಿಸಿದೆ.   ಹಿಂಸಾಚಾರಪೀಡಿತ ಪ್ರದೇಶವಾಗಿರುವ ಕೇಂದ್ರ ಬಾಗ್ದಾದ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 22 ಮಂದಿ ಸತ್ತಿದ್ದಾರೆ ಎಂದು ಅಲ್ಲಿನ ಒಳಾಡಳಿತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry