ಬುಧವಾರ, ನವೆಂಬರ್ 20, 2019
20 °C

ಇರಾಕ್: ಆತ್ಮಹತ್ಯಾ ದಾಳಿಗೆ 47 ಬಲಿ

Published:
Updated:

ಕಿರ್‌ಕುಕ್ (ಎಎಫ್‌ಪಿ): ಇರಾಕಿನ ಕೆಫೆ ಕೇಂದ್ರವೊಂದರ ಮೇಲೆ ಅಪರಿಚಿತರು ನಡೆಸಿದ ಹಿಂಸಾತ್ಮಕ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 47ಮಂದಿ ಸಾವನ್ನಪ್ಪಿದ್ದಾರೆ.ರಂಜಾನ್ ಹಿನ್ನೆಲೆಯಲ್ಲಿ ಉಪವಾಸ ನಿರತ ಮುಸ್ಲಿಂ ಬಾಂಧವರು ಶುಕ್ರವಾರ ರಾತ್ರಿ ಕುರ್‌ಕುಕ್ ನಗರದ ಕೆಫೆಯೊಂದರಲ್ಲಿ `ಇಫ್ತಾರ್' (ಸೌಹಾರ್ದ) ಕೂಟ ನಡೆಸುತ್ತಿದ್ದರು.ಘಟನೆಯಲ್ಲಿ 38 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ  ಉಳಿದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 9 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇರಾಕಿನಲ್ಲಿ ಹಿಂಸಾಚಾರ ಮತ್ತು ಆತ್ಮಹತ್ಯಾ ದಾಳಿಗೆ ಈ ವರ್ಷ 2,500 ಮಂದಿ ಬಲಿಯಾಗಿದ್ದಾರೆ. ಜುಲೈ ತಿಂಗಳೊಂದರಲ್ಲೇ ಈತನಕ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಪ್ರತಿಕ್ರಿಯಿಸಿ (+)