ಇರಾಕ್ ಉಪಾಧ್ಯಕ್ಷ ಹಶೇಮಿ ಬಂಧನಕ್ಕೆ ಕ್ರಮ

7

ಇರಾಕ್ ಉಪಾಧ್ಯಕ್ಷ ಹಶೇಮಿ ಬಂಧನಕ್ಕೆ ಕ್ರಮ

Published:
Updated:
ಇರಾಕ್ ಉಪಾಧ್ಯಕ್ಷ ಹಶೇಮಿ ಬಂಧನಕ್ಕೆ ಕ್ರಮ

ಲ್ಯೋನ್ (ಫ್ರಾನ್ಸ್) (ಎಎಫ್‌ಪಿ): ಇರಾನ್‌ನಿಂದ ಪಲಾಯನ ಮಾಡಿರುವ ಉಪಾಧ್ಯಕ್ಷ ತಾರಿಕ್ ಅಲ್ ಹಶೇಮಿ ಬಂಧನಕ್ಕೆ ಇಂಟರ್‌ಪೊಲ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.ಉಗ್ರರ ದಾಳಿಗಳನ್ನು ನಿರ್ದೇಶಿಸುತ್ತಿರುವ ಹಾಗೂ ಅವುಗಳಿಗೆ ಹಣಕಾಸು ಪೂರೈಸುತ್ತಿರುವ ಆಪಾದನೆಗಳನ್ನು ಹಶೇಮಿ ವಿರುದ್ಧ ಹೊರಿಸಲಾಗಿದೆ.ತಮ್ಮದೇ ಪ್ರತ್ಯೇಕ ಆತ್ಮಾಹುತಿ ಪಡೆ ಹೊಂದಿರುವ ಆರೋಪಕ್ಕೆ ಒಳಗಾಗಿರುವ ಹಶೇಮಿ ವಿರುದ್ಧ ಪ್ರಸ್ತುತ ಬಾಗ್ದಾದ್ ನ್ಯಾಯಾಲಯದಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ. ಆದರೆ ಹಶೇಮಿ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ.ಇರಾಕ್‌ನಲ್ಲಿ ತಮ್ಮ ಭದ್ರತೆ ಹಾಗೂ ಭಯಮುಕ್ತ ವಿಚಾರಣೆಯ ಬಗ್ಗೆ ಭರವಸೆ ನೀಡಿದರೆ ತಾವು ವಿಚಾರಣೆಗೆ ಹಾಜರಾಗಲು ಸಿದ್ಧ ಎಂದು ಮಂಗಳವಾರ ಹಶೇಮಿ ಅಂತರ್ಜಾಲದಲ್ಲಿ ಸ್ಪಷ್ಟಪಡಿಸಿದ್ದಾರೆ. ಜಗತ್ತಿನ 190 ರಾಷ್ಟ್ರಗಳು ಇಂಟರ್‌ಪೋಲ್ ಸದಸ್ಯತ್ವ ಹೊಂದಿದ್ದು, ನೋಟಿಸ್ ಜಾರಿ ಮಾಡಿರುವುದು ಅವರನ್ನು ಪತ್ತೆ ಹಚ್ಚಲು ನೆರವಾಗಲಿದೆ ಎಂದು ಅಂತರರಾಷ್ಟ್ರೀಯ ಪೊಲೀಸ್ ಮೂಲಗಳು ಅಭಿಪ್ರಾಯಪಟ್ಟಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry