ಬುಧವಾರ, ಮೇ 25, 2022
24 °C

ಇರಾನಿ ಕಪ್: ರಾಜಸ್ತಾನ ತಂಡಕ್ಕೆ ಕಠಿಣ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ಭಾರತ ಇತರೆ ತಂಡದವರು ಸತತ ಆರನೇ ಬಾರಿ ಇರಾನಿ ಕಪ್ ಗೆಲ್ಲುವುದು ಹೆಚ್ಚುಕಡಿಮೆ ಖಚಿತ ಎನಿಸಿದೆ. ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಇತರೆ ತಂಡ ರಾಜಸ್ತಾನದ ಗೆಲುವಿಗೆ 618 ರನ್‌ಗಳ ಅಸಾಧ್ಯ ಗುರಿ ನೀಡಿದೆ.ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಾಲ್ಕನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ರಾಜಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಅಂತಿಮ ದಿನವಾದ ಬುಧವಾರ ಗೆಲುವು ಪಡೆಯಲು 590 ರನ್ ಗಳಿಸಬೇಕಿದೆ. ಇದು ಅಸಾಧ್ಯದ ಮಾತು. ಡ್ರಾ ಸಾಧಿಸಬೇಕಾದರೆ ದಿನವಿಡೀ ಬ್ಯಾಟ್ ಮಾಡಬೇಕು. ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಭಾರತ ಇತರೆ ಚಾಂಪಿಯನ್ ಆಗಲಿದೆ.ಸಂಕ್ಷಿಪ್ತ ಸ್ಕೋರ್: ಭಾರತ ಇತರೆ: ಮೊದಲ ಇನಿಂಗ್ಸ್ 153.4 ಓವರ್‌ಗಳಲ್ಲಿ 663 ಮತ್ತು ಎರಡನೇ ಇನಿಂಗ್ಸ್ 54 ಓವರ್‌ಗಳಲ್ಲಿ 2 ವಿಕೆಟ್‌ಗೆ 354 ಡಿಕ್ಲೇರ್ಡ್ (ಅಭಿನವ್ ಮುಕುಂದ್ 154, ಶಿಖರ್ ಧವನ್ 155, ಮನೀಷ್ ಪಾಂಡೆ ಔಟಾಗದೆ 19). ರಾಜಸ್ತಾನ: ಮೊದಲ ಇನಿಂಗ್ಸ್ 134.3 ಓವರ್‌ಗಳಲ್ಲಿ 400 (ಅಶೋಕ್ ಮೆನೇರಿಯಾ 79, ಆರ್. ವಿನಯ್‌ಕುಮಾರ್ 74ಕ್ಕೆ 2, ಪ್ರಗ್ಯಾನ್ ಓಜಾ 86ಕ್ಕೆ 5) ಮತ್ತು ಎರಡನೇ ಇನಿಂಗ್ಸ್ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.