ಇರಾನ್ ಅಣ್ವಸ್ತ್ರದಿಂದ ಬೆದರಿಕೆ: ಪೆರಿಸ್

7

ಇರಾನ್ ಅಣ್ವಸ್ತ್ರದಿಂದ ಬೆದರಿಕೆ: ಪೆರಿಸ್

Published:
Updated:

ಜೆರುಸಲೇಂ (ಪಿಟಿಐ): ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮ ಒಂದು ದೊಡ್ಡ ಬೆದರಿಕೆಯಾಗಿದೆ ಎಂದು ಬಣ್ಣಿಸಿರುವ ಇಸ್ರೇಲ್ ಅಧ್ಯಕ್ಷ ಶಿಮಾನ್ ಪೆರಿಸ್ ಅವರು, ಈ ಯುದ್ಧ ತಂತ್ರಗಾರಿಕೆಯನ್ನು ವಿಫಲಗೊಳಿಸಲು ಸಮಾಲೊಚನಾ ಪಟ್ಟಿಯಲ್ಲಿ ಎಲ್ಲ ತಂತ್ರಗಳು ಇರುವುದಾಗಿ ಹೇಳಿದ್ದಾರೆ.ಅವರು ಶುಕ್ರವಾರ ಇಲ್ಲಿ ಅಮೆರಿಕದ ಪ್ರಮುಖ ಯಹೂದಿ ಸಂಘಟನೆಗಳ ಅಧ್ಯಕ್ಷರನ್ನುದ್ದೇಶಿಸಿ ಮಾತನಾಡಿ, `ಇರಾನ್ ಅಣ್ವಸ್ತ್ರ ಕಾರ್ಯಕ್ರಮವು ಇಸ್ರೇಲ್‌ಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಅಪಾಯಕಾರಿ~ ಎಂದು ಅಭಿಪ್ರಾಯಪಟ್ಟಿದ್ದಾರೆ.`ಇರಾನ್ ಜಾಗತಿಕ ಭಯೋತ್ಪಾದನೆಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆಯಲ್ಲದೆ, ನೈತಿಕ ಭ್ರಷ್ಟಾಚಾರ ಕೇಂದ್ರವೂ ಆಗಿದೆ~ ಎಂದಿದ್ದಾರೆ.`ಇಸ್ರೇಲ್ ಯಾವುದೇ ಬಾಹ್ಯ ಬೆದರಿಕೆಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಮತ್ತು ಸಾಮರ್ಥ್ಯ ಹೊಂದಿದೆ~ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry