ಗುರುವಾರ , ಆಗಸ್ಟ್ 22, 2019
22 °C

ಇರಾನ್ ಅಧ್ಯಕ್ಷರಾಗಿ ಹಸನ್ ರೋಹಾನಿ ಪ್ರಮಾಣ ವಚನ

Published:
Updated:
ಇರಾನ್ ಅಧ್ಯಕ್ಷರಾಗಿ ಹಸನ್ ರೋಹಾನಿ ಪ್ರಮಾಣ ವಚನ

ಟೆಹರಾನ್ (ಪಿಟಿಐ): ಇರಾನಿನ ಏಳನೇ ಅಧ್ಯಕ್ಷರಾಗಿ ಹಸನ್ ರೋಹಾನಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.ಇರಾನಿನಲ್ಲಿ ಈಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 64ವರ್ಷದ ಹಸನ್ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದ್ದರು. ಹಸನ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಗಣ್ಯರು ಸಾಕ್ಷಿಯಾದರು.ಹಸನ್ ಅವರ ಅಧ್ಯಕ್ಷೀಯ ಅವಧಿ ನಾಲ್ಕು ವರ್ಷ ಇದ್ದು, 2002ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು.ಹಸನ್ ಅವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ಇರಾನ್‌ನ ಬಾಂಧವ್ಯ ವೃದ್ಧಿಗೊಳ್ಳುವ ನಿರೀಕ್ಷೆ ಇದೆ ಎಂದು ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಆಶಿಸಿದ್ದಾರೆ.

Post Comments (+)