ಶುಕ್ರವಾರ, ಮೇ 14, 2021
35 °C

ಇರಾನ್ ಅಧ್ಯಕ್ಷರ ಆಯ್ಕೆಗೆ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಹರಾನ್ (ಎಎಫ್‌ಪಿ): ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ಉತ್ತರಾಧಿಕಾರಿ ಗಾದಿಗೆ ಶುಕ್ರವಾರ ಚುನಾವಣೆ ನಡೆದಿದ್ದು ಮಧ್ಯರಾತ್ರಿವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇಶದ 11ನೇ ಅಧ್ಯಕ್ಷೀಯ ಚುನಾವಣೆ ಇದಾಗಿದ್ದು, ಸಂಪ್ರದಾಯವಾದಿ ಹಾಗೂ ಸೌಮ್ಯವಾದಿ ಗುಂಪುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ರಾಷ್ಟ್ರದ 5 ಕೋಟಿ 50 ಲಕ್ಷ ಜನರು ಮತದಾನ ಮಾಡುತ್ತಿದ್ದು, ಇವರಲ್ಲಿ ಒಂದು ಕೋಟಿ 60 ಲಕ್ಷ ಜನ ಮೊದಲಬಾರಿಗೆ ಮತದಾನದ ಅರ್ಹತೆ ಪಡೆದಿದ್ದಾರೆ. ರಾಷ್ಟ್ರದಾದ್ಯಂತ 60 ಸಾವಿರ ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಚುನವಾಣೆ ಶಾಂತಿಯುತವಾಗಿ ನಡೆಯಲು ವ್ಯಾಪಕ ಭದ್ರತೆ ಏರ್ಪಡಿಸಲಾಗಿತ್ತು.ಕರೆ: ಎಲ್ಲರೂ ಮತದಾನದಲ್ಲಿ ತೊಡಗಿಕೊಳ್ಳಬೇಕೆಂದು ಇರಾನ್ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಮತದಾರರಿಗೆ ಕರೆಕೊಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.