ಶುಕ್ರವಾರ, ಮೇ 7, 2021
26 °C

ಇರಾನ್ ದಿಗ್ಬಂಧನ: ಅಮೆರಿಕ ಕಾಂಗ್ರೆಸ್ ವರದಿಯ ಅಭಿಪ್ರಾಯ:ಲಾಭದ ನಿರೀಕ್ಷೆಯಲ್ಲಿ ಭಾರತ, ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಇರಾನ್ ಮೇಲೆ ಅಂತರರಾಷ್ಟ್ರೀಯ ದಿಗ್ಬಂಧನ ವಿಧಿಸುವುದರಿಂದ ತಮಗೆ ರಿಯಾಯಿತಿಯ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿ ಎರಡು ಪ್ರಮುಖ ತೈಲ ಖರೀದಿ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಇರುವುದಾಗಿ ಅಮೆರಿಕ ಕಾಂಗ್ರೆಸ್ ರಚಿಸಿದ ಪರಿಣತರ ಸಮಿತಿ ವರದಿ ತಿಳಿಸಿದೆ.ಭಾರತವು ಸುಮಾರು ಶೇ 45ರಷ್ಟು ತೈಲು ಖರೀದಿಯನ್ನು ರೂಪಾಯಿಯಲ್ಲೇ ಮಾಡಬೇಕೆಂದು ಬಯಸಿದ್ದು, ಇದಕ್ಕೆ ಇರಾನ್ ಒಪ್ಪಿಗೆಯನ್ನು ನಿರೀಕ್ಷಿಸುತ್ತಿದೆ ಎಂದು ಈ ವಿವಿಧ ಕ್ಷೇತ್ರಗಳ ಪರಿಣತರನ್ನು ಒಳಗೊಂಡ ಕಾಂಗ್ರೆಸ್‌ನ ಸ್ವತಂತ್ರ ಸಂಶೋಧನಾ ಸೇವಾ (ಸಿಆರ್‌ಎಸ್) ತಂಡ ಹೇಳಿದೆ.ಆದರೆ ಇರಾನ್‌ನಲ್ಲಿ ರೂಪಾಯಿ ಪರಿವರ್ತನೆ ಕಷ್ಟಕರವಾಗಿರುವುದರಿಂದ ಬಂಡವಾಳ ಹೂಡಿಕೆ ಅಥವಾ ಸರಕು ವಿನಿಮಯ ಅಥವಾ ಚಿನ್ನದ ಸಲ್ಲಿಕೆ ಮೂಲಕ ವ್ಯಾಪಾರ ಕುದುರಿಸಲು ಭಾರತ ಉದ್ದೇಶಿಸಿದೆ ಎಂದು ಅದು ನುಡಿದಿದೆ.ಇರಾನ್‌ನ ರಿಯಾಯಿತಿಗಳು ಭಾರತಕ್ಕೆ ಆಕರ್ಷಕವಾಗಿದ್ದು, ಇದರಿಂದಾಗಿ ಅದು ತೈಲ ಖರೀದಿಯನ್ನು ದಿನವೊಂದಕ್ಕೆ 3 ಲಕ್ಷದ 50 ಸಾವಿರ ಬಾರೆಲ್‌ಗಳಷ್ಟು ಇಳಿಸಬೇಕೆಂಬ ಅಮೆರಿಕದ ಸಲಹೆಯನ್ನು ತಿರಸ್ಕರಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.ಭಾರತದಂತೆಯೇ ಚೀನಾ ಮತ್ತು ಟರ್ಕಿ ಕೂಡಾ ಇರಾನ್ ಮೇಲಿನ ದಿಗ್ಬಂಧನದಿಂದ ಲಾಭ ನಿರೀಕ್ಷಿಸುತ್ತಿವೆ. ನಗದು ಅಥವಾ ಸರಕು ವಿನಿಮಯದ ಮೂಲಕ ತೈಲ ಖರೀದಿಗೆ ಇವು ಬಯಸಿದ್ದು, ಇದರಿಂದ ದಿಗ್ಬಂಧನದ ಮೇಲೆ ಯಾವುದೇ ಪರಿಣಾಮ ಉಂಟಾಗದು ಎಂಬ ಅಭಿಪ್ರಾಯ ಈ ದೇಶಗಳದ್ದು. ಇರಾನ್ ಮೇಲೆ ಬಹುಪಕ್ಷೀಯ ದಿಗ್ಬಂಧನ ವಿಧಿಸುವ ಬಗ್ಗೆ ಅವು ಮಿಶ್ರ ಪ್ರತಿಕ್ರಿಯೆ ಹೊಂದಿವೆ ಎಂದು ವರದಿಯಲ್ಲಿ ಸಮಿತಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.