ಗುರುವಾರ , ಮೇ 6, 2021
27 °C

ಇರಾನ್ ಪರಮಾಣು ಕಾರ್ಯಕ್ರಮ:13ರಂದು ಮಹತ್ವದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ತಾನ್‌ಬುಲ್(ಐಎಎನ್‌ಎಸ್): ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ತಿಂಗಳ 13ರಂದು ಇಸ್ತಾನ್‌ಬುಲ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿರುವ ಐದು ರಾಷ್ಟ್ರಗಳು, ಜರ್ಮನಿ ಮತ್ತು ಇರಾನ್ ಮಧ್ಯೆ ಮಹತ್ವದ ಸಭೆ ನಡೆಯಲಿದೆ.ಸೌದಿ ಅರೇಬಿಯಾದಲ್ಲಿ ಶನಿವಾರ ಭದ್ರತೆಗೆ ಸಂಬಂಧಿಸಿದ ಸಭೆಯ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಒಂದು ವರ್ಷದ ಬಿಕ್ಕಟ್ಟಿನ ನಂತರ ಈ ಸಭೆ ನಡೆಯಲಿದೆ ಎಂದರು. ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿರುವ ಐದು ರಾಷ್ಟ್ರಗಳು ಮತ್ತು ಜರ್ಮನಿ (ಪಿ5+ 1) ಮತ್ತು ಇರಾನ್ 2011ರಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆಸಿದ್ದ ಸಭೆ ಫಲಪ್ರದವಾಗಿರಲಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.