ಸೋಮವಾರ, ನವೆಂಬರ್ 18, 2019
21 °C

ಇರಾನ್- ಪಾಕ್ ಗಡಿಯಲ್ಲಿ ಭೂಕಂಪ: 52 ಸಾವು

Published:
Updated:
ಇರಾನ್- ಪಾಕ್ ಗಡಿಯಲ್ಲಿ ಭೂಕಂಪ: 52 ಸಾವು

ಟೆಹರಾನ್/  ಇಸ್ಲಾಮಾಬಾದ್ (ಎಎಫ್‌ಪಿ, ಪಿಟಿಐ ): ಆಗ್ನೇಯ ಇರಾನ್, ದುಬೈ, ಬಹರಿನ್ ಮತ್ತು  ದಕ್ಷಿಣ ಏಷ್ಯಾದ ಹಲವೆಡೆ  ಮಂಗಳವಾರ ಪ್ರಬಲ ಭೂಕಂಪನ ಸಂಭವಿಸಿದೆ.ಇದರಿಂದ ಇರಾನ್‌ನಲ್ಲಿ 40 ಮತ್ತು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ  12ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು  ವರದಿ ಮಾಡಿವೆ. ಘಟನೆಯಲ್ಲಿ ನೂರಾರು ಮಂದಿ ಗಾಯ ಗೊಂಡಿದ್ದಾರೆ. ಸಂಚಾರ ಹಾಗೂ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಎಷ್ಟು ಪ್ರಮಾಣದಲ್ಲಿ ಆಸ್ತಿ ಹಾನಿಗೊಂಡಿದೆ ಎನ್ನುವ   ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.ಇರಾನ್‌ನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಯು 7.5ರಷ್ಟು ಇತ್ತು ಎಂದು ಇರಾನ್  ಭೂಕಂಪನ ಮಾಪನ ಇಲಾಖೆಯ ಹೇಳಿದ್ದು. ಕಂಪನದ ಕೇಂದ್ರ ಬಿಂದು ಪಾಕಿಸ್ತಾನದ ಗಡಿಯಲ್ಲಿ ಕೇಂದ್ರಿಕೃತವಾಗಿತ್ತು. ಅಮೆರಿಕದ ಭೂಗರ್ಭ ಇಲಾಖೆಯ ಕೇಂದ್ರದ ಪ್ರಕಾರ ಕಂಪನದ ತೀವ್ರತೆಯ ಪ್ರಮಾಣ ರಿಕ್ಟರ್ ಮಾಪಕದಲ್ಲಿ 7.8 ರಷ್ಟು ಇತ್ತು. 15.2 ಕಿ.ಮೀಟರ್ ಆಳದಲ್ಲಿ ಕೇಂದ್ರಿಕೃತವಾಗಿತ್ತು ಎಂದು   ಹೇಳಿದೆ.

ಸುರಕ್ಷಿತ ಪ್ರದೇಶಗಳಿಗೆ ಜನರನ್ನು ಸ್ಥಳಾಂತರಗೊಳಿಸುವ ಸಲುವಾಗಿ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ ಎಂದು ಇರಾನ್ ಅಧಿಕಾರಿಗಳು  ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)