ಇರಾನ್ ಬೆದರಿಕೆ ಜಗ್ಗದ ಅಮೆರಿಕ

7

ಇರಾನ್ ಬೆದರಿಕೆ ಜಗ್ಗದ ಅಮೆರಿಕ

Published:
Updated:

ವಾಷಿಂಗ್ಟನ್/ಟೆಹರಾನ್  (ಪಿಟಿಐ): ಇರಾನ್‌ನ `ಪರಮಾಣು ಶಕ್ತಿ~ ಪ್ರದರ್ಶನವು ತಮ್ಮನ್ನು ಕಿಂಚಿತ್ತೂ ಬಾಧಿಸಿಲ್ಲ ಎಂದಿರುವ ಅಮೆರಿಕ, ಆ ರಾಷ್ಟ್ರದ ಪರಮಾಣು ಪ್ರಗತಿ ಕೇವಲ ಬಡಾಯಿ. ಅಣು ಸ್ಥಾವರಕ್ಕೆ ಇಂಧನದ ಸರಳು ಜೋಡಿಸಿದ ಸಂಭ್ರಮ ಆ ದೇಶಕ್ಕಷ್ಟೇ ಸೀಮಿತ ಎಂದು ಹೇಳಿದೆ.

 

ಈ ಮಧ್ಯೆ `ಪರಮಾಣು ಶಕ್ತಿ~ ಪ್ರದರ್ಶಿಸಿರುವ ಇರಾನ್, ಈಗ ವಿಶ್ವದ ಬಲಾಢ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲು ಉತ್ಸುಕತೆ ತೋರುತ್ತಿದೆ.`ಬುಧವಾರದ ಘಟನೆಯಿಂದ ತನ್ನ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಒತ್ತಡದ ತೀವ್ರತೆ ಮತ್ತು ಹೇರಲಾದ ನಿರ್ಬಂಧಗಳಿಂದ ತಾನು ಜಾಗತಿಕವಾಗಿ ಮೂಲೆಗುಂಪಾಗಬಹುದು ಎಂಬ   ಆತಂಕ ಆ  ರಾಷ್ಟ್ರಕ್ಕೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ~ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲೆಂಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry