ಗುರುವಾರ , ನವೆಂಬರ್ 21, 2019
21 °C

ಇರಾನ್ ಭೂಕಂಪನ: 3 ಬಲಿ

Published:
Updated:

ವಾಷಿಂಗ್ಟನ್ (ಎಎಫ್‌ಪಿ): ಇರಾನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಮೂವರು ಬಲಿಯಾಗಿದ್ದಾರೆ.ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.3ರಷ್ಟು ಇತ್ತು ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯದ ಮೂಲಗಳು ತಿಳಿಸಿವೆ.ಬಂದಾರ್ ಬುಶೆರ್ ನಗರದಿಂದ 90 ಕಿ. ಮೀ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ 12 ಕಿ. ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ಇರಾನ್‌ನ ಭೂಕಂಪ ವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ. ಕೊಲ್ಲಿ ಬಂದರಿಗೆ ಸಮೀಪದಲ್ಲಿ ಈ ಭೂಕಂಪನ ಸಂಭವಿಸಿದ್ದು, ಇರಾನ್‌ನ ಏಕೈಕ ಅಣುಸ್ಥಾವರವು ಸಹ ಸಮೀಪದಲ್ಲೇ ಇರುವುದರಿಂದ ಆತಂಕ ಹೆಚ್ಚಿದೆ. ಕೊಲ್ಲಿ ರಾಷ್ಟ್ರಗಳಾದ ಕುವೈತ್, ಕತಾರ್ ಮತ್ತು ಯುಎಇಯಲ್ಲೂ ಭೂಕಂಪನದ ಅನುಭವವಾಗಿದೆ.

ಪ್ರತಿಕ್ರಿಯಿಸಿ (+)