ಶನಿವಾರ, ಏಪ್ರಿಲ್ 17, 2021
27 °C

ಇರಾನ್ ಮೇಲೆ ದಾಳಿಗೆ ಇಸ್ರೇಲ್ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಇರಾಕ್ ಮರುಭೂಮಿಯಲ್ಲಿ ಸೇನಾ ತಾಲೀಮು ನಡೆಸಿದ ಬಳಿಕ, `ಕ್ರಿಸ್ಮಸ್~ಗೆ ಮುಂಚಿತವಾಗಿ ಇರಾನ್ ವಿರುದ್ಧ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮ ವರದಿ ತಿಳಿಸಿವೆ.ಇರಾನ್ ಪರಮಾಣು ಕಾರ್ಯಕ್ರಮದ ವಿರುದ್ಧ, ಅದರಲ್ಲೂ ಮುಖ್ಯವಾಗಿ ಪವಿತ್ರ ನಗರ ಕೋಮ್ ಬಳಿಯ ಫೋರ್ಡೊದಲ್ಲಿನ ಯುರೇನಿಯಂ ಭದ್ರಕೋಟೆಯನ್ನು ಗುರಿಯಾಗಿರಿಸಿಕೊಂಡು ಈ ವರ್ಷದ ಅಂತ್ಯದೊಳಗಾಗಿ ದಾಳಿ ನಡೆಸಲು ಇಸ್ರೇಲ್ ಸೇನಾಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು `ಸನ್~ ಪತ್ರಿಕೆ ವರದಿ ಮಾಡಿದೆ.

ಒಂದು ವೇಳೆ ಅಮೆರಿಕ ನೆರವು ನೀಡದಿದ್ದಲ್ಲಿ ಇಸ್ರೇಲ್ ಏಕಾಂಗಿಯಾಗಿ ದಾಳಿ ನಡೆಸಲು ಆ ದೇಶದ ಮುಖಂಡರು ನಿರ್ಧರಿಸಿರುವುದಾಗಿ ಪ್ರಕಟಿಸಿದೆ.ನವೆಂಬರ್ 6ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ದಾಳಿ ನಡೆಸಲು ಜಾಗೃತ ದಳದ ವಿಶ್ಲೇಷಕರು ತಿಳಿಸಿರುವುದಾಗಿಯೂ ವರದಿಗಳು ಹೇಳಿವೆ.ಪ್ರತಿಭಟನೆ: ಇರಾನ್‌ನ ರಾಷ್ಟ್ರೀಯ  `ಕಡ್ಸ್~ ದಿನಾಚರಣೆ ಪ್ರಯುಕ್ತ ಶುಕ್ರವಾರ ಟೆಹರಾನ್‌ನ ಬೀದಿಗಳಲ್ಲಿ ಜನರು ರ‌್ಯಾಲಿಗಳನ್ನು ನಡೆಸಿ ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಉರಿ ಬಿಸಿಲಿನಲ್ಲೂ ಪ್ಯಾಲೆಸ್ಟೈನ್ ಧ್ವಜ ಮತ್ತು `ಇಸ್ರೇಲ್‌ನ ಅಂತ್ಯ~ಎಂದು ಬರೆದ ಬ್ಯಾನರ್‌ಗಳನ್ನು ಹಿಡಿದು ಅಪಾರ ಜನರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.