ಇರಾನ್: ವಿರೋಧಿ ನಾಯಕರ ವಿರುದ್ಧ ಪ್ರತಿಭಟನೆ ನಿರ್ಧಾರ

7

ಇರಾನ್: ವಿರೋಧಿ ನಾಯಕರ ವಿರುದ್ಧ ಪ್ರತಿಭಟನೆ ನಿರ್ಧಾರ

Published:
Updated:

ಟೆಹರಾನ್/ಬರ್ಲಿನ್ (ಡಿಪಿಎ):  ವಿರೋಧ ಪಕ್ಷದ ಇಬ್ಬರು ನಾಯಕರ ವಿರುದ್ಧ ಇರಾನ್‌ನ ಸಂಸದರು, ಧರ್ಮ ಗುರುಗಳು, ಸರ್ಕಾರದ ಪರ ಇರುವ ಸಾರ್ವಜನಿಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ವಿರೋಧ ಪಕ್ಷದ ಧುರೀಣರಾದ ಮಿರ್ ಹೊಸೇನ್ ಮೌಸವಿ ಮತ್ತು ಮೆಹದಿ ಕರೊಬಿ ಅವರು ವಿದೇಶಿಯರ ಜತೆ ಸೇರಿಕೊಂಡು ಇಸ್ಲಾಂ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಇಬ್ಬರು ನಾಯಕರನ್ನು ಗಲ್ಲಿಗೇರಿಸಬೇಕು ಎಂದು ಧರ್ಮ ಗುರುಗಳು ಮತ್ತು ಸರ್ಕಾರದ ಪರ ಇರುವವರು ಆಗ್ರಹಪಡಿಸಿದ್ದಾರೆ.

ಗ್ರೀನ್ ವೇವ್ ಆಂದೋಲನ ನಡೆಸುತ್ತಿರುವ ಮೌಸವಿ ಮತ್ತು ಕರೊಬಿ ಅವರು ಕಳೆದ ಸೋಮವಾರ ಬೃಹತ್ ರ್ಯಾಲಿ ನಡೆಸಿ ಈಜಿಪ್ಟ್‌ನಲ್ಲಿ ಸರ್ಕಾರದ ವಿರುದ್ಧದ ನಡೆದ ಆಂದೋಲನವನ್ನು ಬೆಂಬಲಿಸಿ ಮಾತನಾಡಿದ್ದರು. ಜತೆಗೆ ಇರಾನ್ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು.ಇವರನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂಬ ವಾದವನ್ನು ನ್ಯಾಯಾಂಗದ ಮುಖ್ಯಸ್ಥ ಅಯತೊಲ್ಲಾ ಸಡೆಕ್ ಅಮೊಲಿ ಲರಿಜಾನಿ ಒಪ್ಪುತ್ತಿಲ್ಲ. ಬದಲಿಗೆ ಕಾನೂನು ಪ್ರಕಾರ ತನಿಖೆ ನಡೆಯಬೇಕು ಎಂದು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry