ಮಂಗಳವಾರ, ನವೆಂಬರ್ 12, 2019
27 °C

ಇರುವೆಗಳು ಭೂಕಂಪನ ಗ್ರಾಹಿ!

Published:
Updated:

ನ್ಯೂಯಾರ್ಕ್ (ಪಿಟಿಐ): ಭೂಕಂಪನ ಸಂಭವಿಸುವುದನ್ನು ಇರುವೆಗಳು ಒಂದು ದಿನ ಮುಂಚಿತವಾಗಿಯೇ ಗ್ರಹಿಸುತ್ತವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಜರ್ಮನಿಯ ಡುಯಿಸ್‌ಬರ್ಗ್-ಎಸ್ಸೆನ್ ವಿಶ್ವವಿದ್ಯಾಲದ ಗೇಬ್ರಿಯನ್ ಬೆರ್ಬೆರಿಚ್ ಅವರ ನೇತೃತ್ವದ ತಜ್ಞರ ತಂಡ ಈ ಅಧ್ಯಯನ ನಡೆಸಿದೆ.ಭೂಕಂಪನದ ಸಂದರ್ಭದಲ್ಲಿ ಬಿರುಕು ಬಿಡುವ ಸ್ಥಳವನ್ನು ಗುರುತಿಸುವ  (ಸೀಳು, ಸ್ತರಗಳಿರುವ ಜಾಗ) ಕೆಂಪಿರುವೆಗಳು, ಅಲ್ಲೇ ತಮ್ಮ ಗೂಡುಗಳನ್ನು ಕಟ್ಟುತ್ತವೆ ಎಂಬುದನ್ನು ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ.ಭೂಕಂಪನಕ್ಕಿಂತಲೂ ಮುಂಚಿತವಾಗಿ ಇರುವೆಗಳು ತಮ್ಮ ವರ್ತನೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ. ದುರ್ಘಟನೆ ಸಂಭವಿಸಿ ಒಂದು ದಿನ ಕಳೆದ ಬಳಿಕಷ್ಟೇ ಅವುಗಳು ತಮ್ಮ ಚಟುವಟಿಕೆಗಳನ್ನು ಪುನರಾರಂಭಿಸುತ್ತವೆ ಎಂಬ ಸಂಗತಿಯೂ ಅಧ್ಯಯನದಿಂದ ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)