ಇಲಾಖಾ ಪರೀಕ್ಷೆಗೆ ತೊಂದರೆ

7

ಇಲಾಖಾ ಪರೀಕ್ಷೆಗೆ ತೊಂದರೆ

Published:
Updated:

ನಾನು ಒಬ್ಬ ಸರ್ಕಾರಿ ನೌಕರನಾಗಿದ್ದು, ಸರ್ಕಾರಿ ನೌಕರನಿಗೆ ಇಲಾಖಾ ಪರೀಕ್ಷೆಯು ಡಿಸೆಂಬರ್ 26, 2010 ರಂದು ಇದ್ದು, ಈ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಗತ್ಯ. ಆದರೆ ಡಿಸೆಂಬರ್ 26, ರಂದು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಇರುವುದರಿಂದ ಸರ್ಕಾರಿ ನೌಕರ ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗಿರುವುದರಿಂದ ಇಲಾಖಾ ಪರೀಕ್ಷೆಗೆ ಹಾಜರಾಗುವುದು ಕಷ್ಟ.

ಅಲ್ಲದೆ ಒಂದು ವೇಳೆ ಚುನಾವಣಾ ಕರ್ತವ್ಯ ಇಲ್ಲದಿದ್ದರೂ ಕೂಡ ಸರ್ಕಾರಿ ನೌಕರನಿಗೆ ಈ ಮೊದಲೇ ಕರ್ನಾಟಕ ಲೋಕಸೇವಾ ಆಯೋಗ ಪ್ರವೇಶ ಪತ್ರದಲ್ಲಿ ಸೂಚಿಸದ ಶಾಲಾ-ಕಾಲೇಜುಗಳಲ್ಲಿ ಮತದಾನ ನಡೆಯುತ್ತಿದ್ದರೆ ಅವನಿಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಆದುದರಿಂದ ಕರ್ನಾಟಕ ಲೋಕಸೇವಾ ಆಯೋಗ ಈ ಗೊಂದಲವನ್ನು ನಿವಾರಿಸಬೇಕು ಎನ್ನುವುದು ನನ್ನಂತಹ ಹಲವು ಸರ್ಕಾರಿ ನೌಕರನ ಆಶಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry