ಬುಧವಾರ, ಡಿಸೆಂಬರ್ 11, 2019
27 °C
ಪಂಚರಂಗಿ

ಇಲಿಯಾನಾಗೆ ನಟನಾನಂದ!

Published:
Updated:
ಇಲಿಯಾನಾಗೆ ನಟನಾನಂದ!

ಸೈಫ್ ಜೊತೆಗೆ ನಟಿಸುವುದೇ ಚೆಂದ. ಅದೊಂದು ಸುಂದರ ಅನುಭೂತಿ ಎಂದೆಲ್ಲಾ ಹೊಗಳಿಕೆಯ ವರ್ಷಧಾರೆ ಸುರಿಸುತ್ತಿದ್ದಾರೆ ದಕ್ಷಿಣದ ಚೆಲುವೆ, ನಟಿ ಇಲಿಯಾನ ಡಿಕ್ರೂಜ್‌.‘ಬರ್ಫಿ’ ಚಿತ್ರದ ಮೂಲಕ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಇಲಿಯಾನ ಈಗ ಸೈಫ್‌ ನಾಯಕರಾಗಿರುವ ‘ಹ್ಯಾಪಿ ಎಂಡಿಂಗ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಹ್ಯಾಪಿ ...’ ಸೆಟ್‌ನಲ್ಲಿ ಸೈಫ್‌ ಜತೆಗಿನ ತಮ್ಮ ಒಡನಾಟವನ್ನು ಅವರು ಹಂಚಿಕೊಂಡರು.‘ಸೈಫ್‌ ಜೊತೆ ನಟಿಸುವ ಭಾಗ್ಯ ಸಿಕ್ಕಿದ್ದು ಆಕಸ್ಮಿಕ. ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಸ್ಕ್ರಿಪ್ಟ್‌ ಓದಿದೆ. ಕಥೆ ತುಂಬ ಇಷ್ಟವಾಯಿತು. ಚಿತ್ರವನ್ನು ಒಪ್ಪಿಕೊಂಡೆ. ಚಿತ್ರೀಕರಣ ಶುರುವಾದ ಮೇಲೆ ಅವರ ಹಾಸ್ಯ ಪ್ರವೃತ್ತಿ ಕಂಡು ದಂಗಾದೆ. ಸೆಟ್‌ನಲ್ಲಿದ್ದಾಗ ಅವರೊಂದಿಗೆ ಕಾಲ ಕಳೆಯುವುದೇ ಸಂತೋಷದ ಸಂಗತಿಯಾಗಿತ್ತು’ ಎನ್ನುತ್ತಾರೆ ಅವರು.ಬಾಲಿವುಡ್‌ನತ್ತ ಮುಖ ಮಾಡುವ ಮುನ್ನ ದಕ್ಷಿಣದ ಸಿನಿಮಾಗಳಲ್ಲಿ  ಇಲಿಯಾನ ಬ್ಯುಸಿಯಾಗಿದ್ದರು. ಬಾಲಿವುಡ್‌ನಲ್ಲಿ ಬೇಡಿಕೆ ಕುದುರಿದ ನಂತರ ಅವರು ಇದುವರೆಗೂ ದಕ್ಷಿಣದ ಒಂದು ಚಿತ್ರಕ್ಕೂ ಬಣ್ಣ ಹಚ್ಚಿಲ್ಲ. ಈ ಬಗ್ಗೆ ಕೇಳಿದರೆ, ಅವರು ಉತ್ತರಿಸುವುದು ಹೀಗೆ: ‘ಬಾಲಿವುಡ್‌ಗೆ ಕಾಲಿಟ್ಟ ನಂತರ ಕಾಲಿವುಡ್‌ ಅಥವಾ ಟಾಲಿವುಡ್‌ನಲ್ಲಿ ನಟಿಸಿಲ್ಲ ಅಂದಮಾತ್ರಕ್ಕೆ ನಾನು ದಕ್ಷಿಣ ಭಾರತೀಯ ಬಣ್ಣದ ಜಗತ್ತಿನೊಂದಿಗೆ ಸಂಬಂಧ ಕಡಿದುಕೊಂಡಿದ್ದೇನೆ ಎಂದು ಅರ್ಥವಲ್ಲ.ದಕ್ಷಿಣದ ಸಿನಿಮಾ ಜಗತ್ತು ತುಂಬ ಕಲರ್‌ಪುಲ್‌. ಅಲ್ಲಿ ನಟಿಸುವ ಇರಾದೆ ನನ್ನೊಳಗೆ ಈಗಲೂ ಇದೆ. ಒಳ್ಳೆಯ ಕಥೆ, ದೊಡ್ಡ ಬ್ಯಾನರ್‌ ಸಿಕ್ಕರೆ  ಈಗಲೂ ನಾನು ನಟಿಸಲು ಸಿದ್ಧ. ದಕ್ಷಿಣವನ್ನು ಮರೆಯುವ ಪ್ರಶ್ನೆಯೇ ಇಲ್ಲ’.ಅಂದಹಾಗೆ, ಶಾಹಿದ್‌ ಕಪೂರ್‌ ಜತೆ ನಟಿಸಿರುವ ‘ಫಟಾ ಪೋಸ್ಟರ್‌ ನಿಕ್ಲಾ ಹೀರೊ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ‘ಇದೊಂದು ಕ್ರೇಜಿ ಚಿತ್ರ. ಇಂಥದ್ದೊಂದು ಚಿತ್ರವನ್ನು ನಾನು ಈ ಮೊದಲು ಮಾಡಿರಲಿಲ್ಲ. ರಾಜ್‌ಕುಮಾರ್‌ ಸಂತೋಷಿ ಅವರ ಕಾಮಿಕ್‌ ಸೆನ್ಸ್‌ ಅದ್ಭುತ. ಈ ವಿಷಯದಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ’–ಇದು ಇಲಿಯಾನ ಮೆಚ್ಚುಗೆಯ ನುಡಿ.

 

ಪ್ರತಿಕ್ರಿಯಿಸಿ (+)