ಇಲಿಯಾನಾ ಏರು ಯಾನ!

7

ಇಲಿಯಾನಾ ಏರು ಯಾನ!

Published:
Updated:

ನಟಿ ಇಲಿಯಾನಾ ಡಿಕ್ರುಜ್ ಇದೀಗ ಬಾಲಿವುಡ್‌ನ ಬೇಡಿಕೆಯ ನಟಿ. `ಬರ್ಫಿ~ ಚಿತ್ರದ ಗೆಲುವು ಅವರಿಗೆ ಅವಕಾಶಗಳನ್ನು ತಂದುಕೊಡುತ್ತಿದೆ. ಮುಂಬೈ ಮೂಲದ ಇಲಿಯಾನಾ ಆರಂಭದಲ್ಲಿ ಬಾಲಿವುಡ್‌ನಲ್ಲಿಯೇ ಅದೃಷ್ಟ ಹುಡುಕಿದವರು.ನಿರಾಶೆಯಿಂದ ದಕ್ಷಿಣದತ್ತ ಮುಖ ಮಾಡಿದವರು. ಅಲ್ಲಿ ಜನಪ್ರಿಯರಾಗಿ ಬಂದು ಬಾಲಿವುಡ್ ಬಾಗಿಲು ಬಡಿದ ಅವರಿಗೆ ಅದೃಷ್ಟ ಖುಲಾಯಿಸಿದೆ. ಅನುರಾಗ್ ಬಸು ನಿರ್ದೇಶನದ, ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ ಜೊತೆ ಅವರು ನಟಿಸಿದ್ದ `ಬರ್ಫಿ~ ಚಿತ್ರದ ಯಶಸ್ಸು ಅವರ ಅದೃಷ್ಟಕ್ಕೆ ಕಾರಣವಾಗಿದೆ.

 

ಆ ಮಾನದಂಡದಿಂದ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರ `ಫಟಾ ಪೋಸ್ಟರ್ ನಿಕ್ಲಾ ಹೀರೋ~ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶಾಹೀದ್ ಕಪೂರ್ ನಾಯಕ.`ಈ ಮೊದಲು ನಾಯಕಿ ಪಾತ್ರಕ್ಕೆ `ಕಾಕ್‌ಟೇಲ್~ ಚಿತ್ರದಲ್ಲಿ ನಟಿಸಿದ್ದ ಡಯಾನಾ ಪೆಂಟಿ ಅವರನ್ನು ಆರಿಸಲಾಗಿತ್ತು. ಆಕೆ ಕತೆಯಲ್ಲಿ ಕೆಲವು ಬದಲಾವಣೆಗಳನ್ನು ಬಯಸಿದ ಕಾರಣ ಇಲಿಯಾನಾ ಅವರನ್ನು ಒಪ್ಪಿಸಲಾಯಿತು.`ಫಟಾ ಪೋಸ್ಟರ್ ನಿಕ್ಲಾ ಹೀರೋ~ ಚಿತ್ರ ನನ್ನ `ಘಾಯಲ್~, `ಅಂದಾಜ್ ಅಪ್ನಾ ಅಪ್ನಾ~, `ಖಾಕಿ~, `ಅಜಬ್ ಪ್ರೇಮ್‌ಕಿ ಘಜಬ್ ಕಹಾನಿ~ ಚಿತ್ರಗಳಂತೆಯೇ ಕುಟುಂಬವೆಲ್ಲಾ  ನೋಡುವಂತಹ ಚಿತ್ರ~ ಎಂದು ಸಂತೋಷಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry