ಇಲ್ಲಗಳ ನಡುವೇ ಜನರ ಬದುಕು

7

ಇಲ್ಲಗಳ ನಡುವೇ ಜನರ ಬದುಕು

Published:
Updated:
ಇಲ್ಲಗಳ ನಡುವೇ ಜನರ ಬದುಕು

ಬಾಣಾವರ: ಸರ್ಕಾರ ವಸತಿ ರಹಿತರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದರೂ ಅವುಗಳಿಂದ ವಂಚಿತರಾದ ಎಷ್ಟೋ ಜನರು ನಮ್ಮಂದಿಗೆ ಇದ್ದಾರೆ ಎಂಬುದಕ್ಕೆ ಪಟ್ಟಣದ ಅಂಚೆ ಕಚೇರಿ ಹಿಂಭಾಗ ವಾಸ ಮಾಡುವ ಜನರೇ ಸಾಕ್ಷಿ.ಪಟ್ಟಣಕ್ಕೆ ಹೊಂದಿಕೊಂಡತಿರುವ ಈ ಜಾಗದಲ್ಲಿ ಜನರು ಸುಮಾರು 20-25 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಈ ಬಡಾವಣೆಯಲ್ಲಿ ಸುಮಾರು 30 ಕುಟುಂಬಗಳಲ್ಲಿ 150 ಜನ ವಾಸ ಮಾಡುತ್ತ್ದ್ದಿದಾರೆ. ಸಾಕಷ್ಟು ಮಂದಿ ಹಳೆಯ ಕಾಲದ ಶಿಥಿಲ ಮನೆಗಳಲ್ಲಿ ವಾಸವಾಗಿದ್ದಾರೆ.ಇಲ್ಲಿ 20 ಕುಟುಂಬಗಳು ಗುಡಿಸಲಿ ನಲ್ಲಿ ವಾಸವಾಗಿವೆ. ಕುಟುಂಬಗಳ ಗಾತ್ರ ದೊಡ್ಡದಾಗಿ ರುವುದರಿಂದ ಒಬ್ಬರು ಮಲಗಿದರೆ ಮತ್ತೊಬ್ಬರು ಕುಳಿತುಕೊಳ್ಳುವಂತಹ ಸ್ಥಿತಿ ಇಲ್ಲಿನದು.ಇಲ್ಲಿ ಎಲ್ಲರ ಜೀವನ ನಡೆಯುವುದು ಕೂಲಿ ಎಂಬ ರಥದಲ್ಲಿ. ಪ್ರತಿದಿನ ಕೂಲಿ ಮಾಡದಿದ್ದರೆ ಒಂದು ಹೊತ್ತಿನ ಊಟಕ್ಕೂ ಪರದಾಡ ಬೇಕಾಗುತ್ತದೆ. ಮನೆ ಮಂದಿಯೆಲ್ಲ ಕೂಲಿ ಕೆಲಸಕ್ಕೆಂದು ಹೋಗುವುದರಿಂದ ಮಕ್ಕಳ ವಿದ್ಯಾಭ್ಯಾಸವೂ ಮೊಟಾಕಾಗುತ್ತಿದೆ. ಸಾಕಷ್ಟು ಮಹಿಳೆಯರು ಹಸುಗೂಸು ಗಳನ್ನು ಮಡಿಲಿನಲ್ಲೇ ಇಟ್ಟುಕೊಂಡು ಹೊಟ್ಟೆ ಪಾಡಿನ ಕಾಯಕ ನಡೆಸುತ್ತಾರೆ. ಇಲ್ಲಿ ಹೆಚ್ಚಿನ ಮನೆಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದೇ ಇಲ್ಲ ತಮ್ಮ ಜೊತೆಯಲ್ಲಿ ಕೂಲಿಗೆ ಕರೆದೂಯ್ಯುವವರೇ ಹೆಚ್ಚು.ಬಹುತೇಕ ಮನೆಗಳಲ್ಲಿ ಶೌಚಾಲಯಗಳಿಲ್ಲ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇರುವುದರಿಂದ ಚರಂಡಿ ನೀರು ಮನೆ ಬಾಗಿಲು ಮುಂದೆ, ರಸ್ತೆಗಳಲ್ಲಿ ಹರಿಯುತ್ತಿದ್ದು, ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಈ ಬಡಾವಣೆ ಯಲ್ಲಿ ರಸ್ತೆಗಳೇ ಸಮರ್ಪಕವಾಗಿಲ್ಲ.ಗ್ರಾಮ ಪಂಚಾಯಿತಿಗೆ ಕೂಗಳತೆಯಲ್ಲಿದ್ದರೂ ಕುಡಿಯುವ ನೀರು ಇಲ್ಲಿ ಗಗನ ಕುಸುಮ. ಇಡೀ ಬಡಾವಣೆಗೆ ಒಂದೇ ವಿದ್ಯುತ್ ಕಂಬವಿದೆ. ಗುಡಿಸಲೇ ಹೆಚ್ಚಾಗಿರುವು ದರಿಂದ ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಮಳೆ ಬಂದರೆ ಮಳೆ ನೀರು ಸೀದಾ ಮನೆ ಒಳಗೆ ನುಗ್ಗುವುದರಿಂದ ಮಳೆ ಬಂದಾಗ ಜನರಿಗೆ ನರಕಯಾತನೆ. ಇಲ್ಲಿನ ಬಹಳ ಜನರಿಗೆ ಚುನಾವಣೆಯ ಮತದಾರ ಪಟ್ಟಿಯಲ್ಲಿ ಹೆಸರುಗಳನ್ನೇ ಸೇರಿಸಿಲ್ಲ. ಇಡೀ ಬಡಾವಣೆ ಸ್ವಚ್ಛತೆ ಇಲ್ಲದೇ ಜನ ಸಾಕ್ರಾಂಮಿಕ ರೋಗದ ಭಯದಲ್ಲೇ ಬದುಕುವಂತಾಗಿದೆ.ಇಷ್ಟೆಲ್ಲಾ ತೊಂದರೆ ಇದ್ದರೂ ಇಲ್ಲಿನ ಜನರು ಕೇಳುವುದು ಹಕ್ಕುಪತ್ರ ಮಾತ್ರ. ಈ ಸಂಬಂಧ ಪಟ್ಟಣದ ಗ್ರಾಮ ಪಂಚಾಯಿತಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ಕಾಯುತ್ತ ದಿನದೂಡುತ್ತಿದ್ದಾರೆ. ಶಾಸಕರು ಇಲ್ಲಿನ ಜನರಿಗೆ ಈ ಬಗ್ಗೆ ಭರವಸೆ ನೀಡಿದ್ದು, ಭರವಸೆ ಹುಸಿಯಾಗದಿರಲೆಂದು ದೇವರನ್ನು ನಿತ್ಯ ಪ್ರಾರ್ಥಿಸುವುದೇ ಕಾಯಕವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry