ಇಲ್ಲಿಗೂ ಬಂತು ಫುಡ್‌ಹಾಲ್

7

ಇಲ್ಲಿಗೂ ಬಂತು ಫುಡ್‌ಹಾಲ್

Published:
Updated:
ಇಲ್ಲಿಗೂ ಬಂತು ಫುಡ್‌ಹಾಲ್

ಹೊಸ ಬಗೆಯ ಆಹಾರೋತ್ಪನ್ನ ಗುರಿಯಾಗಿಸಿಕೊಂಡು ಫ್ಯೂಚರ್ ಗ್ರೂಪ್ ನಗರದಲ್ಲಿ  ಫುಡ್‌ಹಾಲ್ ಮಳಿಗೆ ಆರಂಭಿಸಿದೆ.

ಒಂದೇ ಸೂರಿನಡಿ ಎಲ್ಲವನ್ನೂ ನೀಡುವ ಈ ಮಳಿಗೆಯಲ್ಲಿ ದೈನಂದಿನ ಅಗತ್ಯಗಳಿಂದ ಆರಂಭವಾಗಿ ದೇಶವಿದೇಶಗಳ ಆಹಾರ ಪದಾರ್ಥಗಳು ಲಭ್ಯ. ಅದರೊಂದಿಗೆ ಎಲೆಕ್ಟ್ರಾನಿಕ್ ಅಡುಗೆ ಉಪಕರಣಗಳು ಮತ್ತು ಉನ್ನತ ಗುಣಮಟ್ಟದ ಅಡುಗೆಮನೆ ಉಪಕರಣಗಳು ಇಲ್ಲಿ ದೊರೆಯುತ್ತವೆ.

ಫುಡ್‌ಹಾಲ್‌ನಲ್ಲಿ ತಾಜಾ ಮತ್ತು ಪ್ಯಾಕ್ ಮಾಡಲಾದ ಆಹಾರಗಳ ಮಿಶ್ರಣ ಸಿಗುತ್ತದೆ. ಭಾರತದ ಎಲ್ಲಾ ಆಹಾರ ಶೈಲಿಗಳಲ್ಲದೆ ಅಂತರರಾಷ್ಟ್ರೀಯ ಆಹಾರಶೈಲಿಯ ವಸ್ತುಗಳು ಕೂಡ ಲಭ್ಯ. ಸ್ವಿಸ್ ಟ್ರಫ್ಫಲ್ಸ್‌ನಿಂದ ಕ್ಯಾಮೆಂಬರ್ ಚೀಸ್‌ಗಳವರೆಗೆ; ಫೋಕಾಸಿಯಾ, ಇಟಾಲಿಯನ್ ಬ್ರೆಡ್ ಮತ್ತು ಕ್ಯಾಲಿಫೋರ್ನಿಯಾ ಆ್ಯಪಲ್‌ಗಳವರೆಗೆ ಎಲ್ಲವೂ ಇಲ್ಲುಂಟು.

ಈ ಫುಡ್‌ಹಾಲ್‌ನಲ್ಲಿ ತರಕಾರಿಗಳನ್ನು ಬೇರೆಬೇರೆ ರೀತಿಯಲ್ಲಿ ಕತ್ತರಿಸಿಕೊಡುವುದರ ಜತೆಗೆ ತೆಂಗಿನಕಾಯಿ ತುರಿಯುವುದು, ಹಿಟ್ಟು ಕಲೆಸಿಕೊಡುವ ಸೇವೆಗಳೂ ಸಿಗಲಿವೆ ಎಂದು ಕಂಪೆನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry