`ಇಲ್ಲಿಯವರೆಗೆ ಪ್ರಧಾನಿ ಮಾಡಿದ್ದೇನು?'

7

`ಇಲ್ಲಿಯವರೆಗೆ ಪ್ರಧಾನಿ ಮಾಡಿದ್ದೇನು?'

Published:
Updated:

ಅಹಮದಾಬಾದ್ (ಪಿಟಿಐ): `ಪ್ರಧಾನಿ ಮನಮೋಹನ್ ಸಿಂಗ್ ಅವರು ಇಲ್ಲಿಯವರೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಡಿಯಲ್ಲಿ ಕೆಲಸ ನಿರ್ವಹಿಸಿರಲಿಲ್ಲವೇ?' ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕೆಲಸ ನಿರ್ವಹಿಸಲು ಸಿದ್ಧ ಎಂದು ಪ್ರಧಾನಿ ಸಿಂಗ್ ಅವರು ಸುದ್ದಿಗಾರರಿಗೆ ಹೇಳಿರುವುದಕ್ಕೆ ಪ್ರತಿಯಾಗಿ ಮೋದಿ ಈ ಪ್ರಶ್ನೆ ಕೇಳಿದ್ದಾರೆ.`ಮುಂದಿನ ವರ್ಷ ರಾಹುಲ್ ನಾಯಕತ್ವದಲ್ಲಿ ಖುಷಿಯಿಂದ ಕೆಲಸ ಮಾಡಲು ಸಿದ್ಧ ಎಂದು ಪ್ರಧಾನಿ ಹೇಳಿದ್ದಾರೆ. ಇಷ್ಟು ವರ್ಷಗಳವರೆಗೆ ಅವರು ಅದನ್ನು ಮಾಡಲಿಲ್ಲವೇ? ಮತ್ತೊಮ್ಮೆ ಅವರು ದೇಶವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ಶನಿವಾರ ಸಂಜೆ ಮೋದಿ ಟ್ವಿಟ್ ಮಾಡಿದ್ದಾರೆ.`ದೇಶದ ಆರ್ಥಿಕ ಪರಿಸ್ಥಿತಿ, ತೆಲಂಗಾಣ, ಬಡತನದಂತಹ ಸೂಕ್ಷ್ಮವಾದ ವಿಷಯಗಳನ್ನು ನಿಭಾಯಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ' ಎಂದು ಛತ್ತೀಸ್‌ಗಡದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry