ಇಳುವರಿ ಆಧಾರದ ಮೇಲೆ ಬೆಲೆ ನಿಗದಿಯಾಗಲಿ

7

ಇಳುವರಿ ಆಧಾರದ ಮೇಲೆ ಬೆಲೆ ನಿಗದಿಯಾಗಲಿ

Published:
Updated:

ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಹಂಗಾಮವನ್ನು ಜೂನ್ ಹಾಗೂ ಜುಲೈನಲ್ಲಿ ಆರಂಭಿಸುತ್ತವೆ. ಬಹುತೇಕ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಹಂಗಾಮವನ್ನು ಮುಗಿಸುತ್ತವೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಇಳುವರಿ ಶೇಕಡ 9 ರಿಂದ 10.5 ರವರೆಗೆ ಇರುತ್ತದೆ. (ಅಂದರೆ 1000 ಕೆ.ಜಿ. ಕಬ್ಬನ್ನು ಅರೆದರೆ 90 ರಿಂದ 105 ಕೆ.ಜಿ. ಸಕ್ಕರೆ ಉತ್ಪಾದನೆ).ಇನ್ನು ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಹಂಗಾಮನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆರಂಭಿಸುತ್ತವೆ. ಬಹುತೇಕ ಮೇ ಅಥವಾ ಜೂನ್‌ನಲ್ಲಿ ಹಂಗಾಮನ್ನು ಮುಗಿಸುತ್ತವೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಇಳುವರಿ  ಶೇಕಡ 11 ರಿಂದ 12.5 ರವರೆಗೆ ಇರುತ್ತದೆ.

(ಅಂದರೆ 1000 ಕೆ.ಜಿ. ಕಬ್ಬನ್ನು ಅರೆದರೆ 110 ರಿಂದ 125 ಕೆ.ಜಿ. ಸಕ್ಕರೆ ಉತ್ಪಾದನೆ). ಉತ್ತರ ಕರ್ನಾಟಕದ ಕಪ್ಪು ಎರೆ ಭೂಮಿಯಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಬಹುದು. ಇನ್ನು ಹಗಲಿನಲ್ಲಿ ಬಿಸಿಲು ಹೆಚ್ಚಾಗಿದ್ದರೂ ರಾತ್ರಿ ವೇಳೆಯಲ್ಲಿ ಥಂಡಿಯಾದ ಹವಾಗುಣ ಸಕ್ಕರೆ ಇಳುವರಿಗೆ ಅನುಕೂಲವಾಗಿರುತ್ತದೆ.ಮೇಲ್ಕಂಡ ವಿಷಯಗಳನ್ನು ಗಮನಿಸಿ ಕರ್ನಾಟಕ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ ವರದಿ ತರಿಸಿಕೊಂಡು ವೈಜ್ಞಾನಿಕವಾಗಿ ಪ್ರಾದೇಶಿಕವಾರು ಇಳುವರಿ ಆಧಾರ ಮತ್ತು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ನೋಡಿಕೊಂಡು ಕಬ್ಬಿನ ದರ ನಿಗದಿಪಡಿಸಿದರೆ ಪ್ರತಿ ಹಂಗಾಮಿಗೆ ಮುಂಚೆ ದರ ನಿಗದಿಪಡಿಸಿ ಎಂದು ರೈತರು ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದನ್ನು ತಡೆಗಟ್ಟಬಹುದೆಂದು ಈ ಮೂಲಕ ಮನವಿ ಮಾಡುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry