ಇಳುವರಿ ವೃದ್ಧಿಗೆ ಮಣ್ಣು ಪರೀಕ್ಷೆ ಅಗತ್ಯ

7

ಇಳುವರಿ ವೃದ್ಧಿಗೆ ಮಣ್ಣು ಪರೀಕ್ಷೆ ಅಗತ್ಯ

Published:
Updated:

ಮಾಲೂರು: ರೈತರು ಭೂಮಿಯ ಇಳುವರಿ ವೃದ್ಧಿಗೆ ಮಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯಗತ್ಯ ಎಂದು ದ್ಯಾಪಸಂದ್ರದ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.ಪಟ್ಟಣದ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಚೇರಿ ಆವರಣದಲ್ಲಿ  ಈಚೆಗೆ ಇಪ್ಕೋ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿದರು.

ಮಣ್ಣಿನ ಫಲವತ್ತತೆ ಕೊರತೆಯಿಂದ ಬೆಳೆ ಇಳುವರಿಯಲ್ಲಿ ಕಡಿಮೆಯಾಗಿ ನಷ್ಟ ಅನುಭವಿಸುತ್ತಿದ್ದಾರೆ. ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಮಣ್ಣಿನ ಪರೀಕ್ಷೆ ಅಗತ್ಯವಿದೆ ಎಂದು ತಿಳಿಸಿದರು.ಡಿ.3ರಿಂದ 8ರವರೆಗೆ ಧ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಚೇರಿಯಲ್ಲಿ ಮಣ್ಣಿನ ಪ್ರಯೋಗ ನಡೆಸಲಾಗುವುದು. ತಾಲ್ಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ವಿಜ್ಞಾನಿ ಸತೀಶ್ ತಿಳಿಸಿದರು. ಇಪ್ಕೋ ಸಂಸ್ಥೆ ಸಹಾಯಕ ಸುಧಾಕರ್, ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಎಂ.ಸುಧಾಕರ್, ಪ್ರಸನ್ನ, ಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry