ಶುಕ್ರವಾರ, ಜನವರಿ 17, 2020
23 °C

ಇವರು ಮನುಷ್ಯರೇ?

– ನಾಗಾರ್ಜುನ ಸಾಗ್ಗೆರೆ,ತುಮಕೂರು Updated:

ಅಕ್ಷರ ಗಾತ್ರ : | |

‘ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂಬ ಕಾರಣಕ್ಕೆ ಈ ವರ್ಷ ಪಾಕಿಸ್ತಾನದಲ್ಲಿ 56 ಮಹಿಳೆ­­ಯರನ್ನು ಹತ್ಯೆ ಮಾಡಲಾಗಿದೆ!’ (ಪ್ರ.ವಾ. ನ.29).  ನಾವು ಯಾವ ಶತಮಾನದಲ್ಲಿ ಬದುಕು­ತ್ತಿದ್ದೇವೆ? ‘ಶಿಶುವಿನ ಲಿಂಗ ನಿರ್ಧಾರದಲ್ಲಿ ತಾಯಿಯ ಪಾತ್ರ ಎಳ್ಳಷ್ಟೂ ಇಲ್ಲ’ ಎಂದು ವೈದ್ಯಕೀಯ ವಿಜ್ಞಾನ ಸಾರಿ ಸಾರಿ ಹೇಳಿಲ್ಲವೇ?

ಈ ಕೃತ್ಯ ಎಸಗುವವರು ಮನುಷ್ಯರೋ ಅಥವಾ ರಾಕ್ಷಸರೋ? ಇಂತಹ ಮನೋಭಾವದ ಕ್ರಿಮಿಗಳು ವಾಸಿಸುವ ಸಮಕಾಲದಲ್ಲಿ ಇತರೆ ದೇಶವಾಸಿಗಳು, ಸ್ವತಃ ಅಲ್ಲಿನ ಜನತೆ ನೆಮ್ಮದಿಯಿಂದಿರಲು ಸಾಧ್ಯವೇ?  ವಿಶ್ವಸಂಸ್ಥೆ­ಯಾಗಲೀ, ಜಾಗತಿಕ ನಾಯಕ­ರಾಗಲೀ, ಇತರೆ ನಾಗರಿಕ ಪ್ರಪಂಚವಾಗಲೀ ಏನು ಮಾಡುತ್ತಿದೆ?

ಪ್ರತಿಕ್ರಿಯಿಸಿ (+)