ಇವರು ಹೀಗೆನ್ನುತ್ತಾರೆ........

7

ಇವರು ಹೀಗೆನ್ನುತ್ತಾರೆ........

Published:
Updated:

`ಕ್ರಿಮಿನಲ್ ಮೊಕದ್ದಮೆ ದಾಖಲಿಸಿ~

ವಿಧಾನಸಭೆಯಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ಮಾಜಿ ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ. ಪಾಟೀಲ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರೂ ರಾಜೀನಾಮೆ ನೀಡಬೇಕು. ಹೊಸದಾಗಿ ಜನಾದೇಶ ಪಡೆಯಬೇಕು.ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದೂ ಅಲ್ಲದೆ, ಸವದಿ ಮತ್ತು ಪಾಟೀಲ ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಮಾನ ಇದ್ದವರು ಹೀಗೆ ಮಾಡಲು ಸಾಧ್ಯವಿಲ್ಲ. ಸವದಿ ಮತ್ತು ಪಾಟೀಲ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಾಲದು. ಅವರನ್ನು ಶಾಸಕ ಸ್ಥಾನದಿಂದಲೂ ವಜಾಗೊಳಿಸಬೇಕು. ಅವರ ಜೊತೆ ಸದನದಲ್ಲಿ ಕುಳಿತುಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ.

- ಸಿದ್ದರಾಮಯ್ಯ`ಸ್ವ-ಇಚ್ಛೆಯಿಂದ ರಾಜೀನಾಮೆ~

ಯಾವುದೇ ಆರೋಪ ಬಂದಾಗ ಸ್ವಯಂಪ್ರೇರಣೆಯಿಂದ ರಾಜೀನಾಮೆ ಸಲ್ಲಿಸುವುದು ಬಿಜೆಪಿ ಕಾರ್ಯಕರ್ತರ ಸಂಪ್ರದಾಯ. ಲಕ್ಷ್ಮಣ ಸವದಿ, ಕೃಷ್ಣ ಪಾಲೆಮಾರ್ ಮತ್ತು ಸಿ.ಸಿ. ಪಾಟೀಲ ಅವರು ತಮ್ಮ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡುವಂತೆ ಪಕ್ಷದ ಹೈಕಮಾಂಡ್ ಅವರಿಗೆ ಸೂಚಿಸಿಲ್ಲ. ಘಟನೆಯ ಕುರಿತು ಮೂವರಿಂದಲೂ ವಿವರಣೆ ಪಡೆಯಲಾಗಿದೆ.

- ಬಿ.ಎಸ್. ಯಡಿಯೂರಪ್ಪ`ಮೊಬೈಲ್ ಮಾತ್ರ ನನ್ನದು~

ನಾನು ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿಲ್ಲ. ಅಂಥ ದೃಶ್ಯಗಳನ್ನು ಇನ್ನೊಬ್ಬರ ಮೊಬೈಲ್‌ಗೆ ಕಳುಹಿಸುವುದು ಹೇಗೆ ಎಂಬುದೂ ನನಗೆ ತಿಳಿದಿಲ್ಲ. ಆದರೆ ಅವರು (ಸವದಿ ಮತ್ತು ಪಾಟೀಲ) ನನ್ನ ಮೊಬೈಲ್ ಬಳಸಿ ಬ್ಲೂ ಫಿಲಂ ವೀಕ್ಷಿಸಿದರು. ಸಚಿವನಾಗಿದ್ದಾಗಲೇ ನನ್ನ ವಿರುದ್ಧ ತನಿಖೆ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ.

- ಕೃಷ್ಣ ಪಾಲೆಮಾರ್`ಅವಿವೇಕದ ವರ್ತನೆ~

ಲಕ್ಷ್ಮಣ ಸವದಿ ಮತ್ತು ಸಿ.ಸಿ. ಪಾಟೀಲ ಅವರು ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿರುವುದು ಅವಿವೇಕದ ವರ್ತನೆ. ಇದನ್ನು ಸಮರ್ಥಿಸಲು ಸಾಧ್ಯವಿಲ್ಲ. ಘಟನೆ ಕುರಿತು ಬಿಜೆಪಿ ಪರವಾಗಿ ಜನತೆಯ ಕ್ಷಮೆ ಯಾಚಿಸುತ್ತೇನೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಪ್ರತಿಪಕ್ಷಗಳು ಹರಿಹಾಯುವ ಅಗತ್ಯ ಇಲ್ಲ. ಟೀಕಿಸುವವರು ಒಮ್ಮೆ ತಮ್ಮ ಅಂತಃಕರಣವನ್ನು ಪ್ರಶ್ನಿಸಿಕೊಳ್ಳಲಿ. ಕಾಂಗ್ರೆಸ್ಸಿನ ಎನ್.ಡಿ. ತಿವಾರಿ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾಗ ನಡೆದ ಪ್ರಕರಣ ಎಲ್ಲರಿಗೂ ತಿಳಿದಿದೆ.

- ಸಿ.ಟಿ. ರವಿ, ಬಿಜೆಪಿ ವಕ್ತಾರ`ತನಿಖೆಯಾಗಲಿ~

ಪ್ರಕರಣದ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ಘಟನೆ ಕುರಿತು ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಮೌನ ವಹಿಸಬಾರದು. ತಪ್ಪು ಮಾಡಿದ ಶಾಸಕರನ್ನು ಅನರ್ಹಗೊಳಿಸಬೇಕು.

- ಎಚ್.ಡಿ. ರೇವಣ್ಣ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ`ಒಪ್ಪಲು ಸಾಧ್ಯವಿಲ್ಲ~

ವಿಧಾನಸಭೆಯಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಘಟನೆ ಸಮರ್ಥನೆ ಸಾಧ್ಯವಿಲ್ಲ. ಆದರೆ ಈ ಕುರಿತು ಸಮಗ್ರ ತನಿಖೆ ನಡೆದ ನಂತರ ಸತ್ಯಾಂಶ ಹೊರಬರಲಿದೆ. ಮೂವರು ಮಾಜಿ ಸಚಿವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಚಾರ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಸಂಬಂಧಿಸಿದ್ದು.

- ಎಸ್. ಸುರೇಶ್‌ಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry