ಗುರುವಾರ , ಜೂನ್ 17, 2021
22 °C

ಇವರ ಕೈಗೂ ಸ್ಲೇಟು ಕೊಡಿ!

ಪಿ.ಜೆ. ರಾಘವೇಂದ್ರ,ಮೈಸೂರು Updated:

ಅಕ್ಷರ ಗಾತ್ರ : | |

ಖಾಸಗಿ ಬಸ್ಸಿನಲ್ಲಿ ದಾಖಲೆ ಇಲ್ಲದೇ ಸಾಗಿ­ಸುತ್ತಿದ್ದ ಎರಡು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡು, ಎಫ್.ಐ.ಆರ್.ನಲ್ಲಿ ₨20 ಲಕ್ಷ ಎಂದು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಪೊಲೀಸ್‌ ಠಾಣೆ­ಯೊಂದರ ಎಸ್ಐ ಜಗದೀಶ್ ಮತ್ತು ಕಾನ್‌­ಸ್ಟೆಬಲ್‌ಗಳ  ವಿರುದ್ಧ ಪ್ರಕರಣ ದಾಖಲಾಗಿದೆ.ಜನಸಾಮಾನ್ಯರು ಈ ಅಪರಾಧವೆಸಗಿದ್ದರೆ ಅವರನ್ನು ಬಂಧಿಸಿ, ಏರೋಪ್ಲೇನ್ ಹತ್ತಿಸಿ, ಅವರ ಕೈಗೆ ಸ್ಲೇಟು ನೀಡಿ, ಅವರೊಂದಿಗೆ ಫೋಟೊ ತೆಗೆಸಿ, ಸುದ್ದಿ ಚಾನೆಲ್‌ಗಳಲ್ಲಿ ಬಡಬಡಿಸಿ, ಅವರ ಮುಖಕ್ಕೆ ಮುಸುಕು ಹಾಕಿ, ಅವರ ಭಾವಚಿತ್ರ­ಗಳನ್ನು  ಪೊಲೀಸ್ ಠಾಣೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಆದರೆ ಈ ಆರೋಪಿಗಳಿಗೆ ಹಾಗೆ ಮಾಡಲಾಗುವುದೇ?ತನಗೆ ದೊರೆತ ₨5 ಲಕ್ಷ ಇದ್ದ ಚೀಲವನ್ನು ಮಾಲೀಕರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಮೈಸೂರಿನ  ಗೃಹರಕ್ಷಕ ದಳದ ಶಿವರಂಜಿನಿ ಅವರನ್ನು ನೋಡಿಯಾದರೂ ಇವರು ಪಾಠ ಕಲಿಯಲಿ. ಈ ಭ್ರಷ್ಟ ಪೊಲೀಸರನ್ನು ಕಿತ್ತೊಗೆದು ಗೃಹರಕ್ಷಕ ದಳದ ಶಿವರಂಜಿನಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿ, ಸರ್ಕಾರ ಜವಾಬ್ದಾರಿ ಮೆರೆಯಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.