ಇವು ಮಾದರಿ ಸರ್ಕಾರಿ ಶಾಲೆಗಳು..

7

ಇವು ಮಾದರಿ ಸರ್ಕಾರಿ ಶಾಲೆಗಳು..

Published:
Updated:

ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ, ಗುಣಮಟ್ಟದ ಶಿಕ್ಷಣವಿಲ್ಲ. ಹೀಗೆ ಸಾಗುತ್ತದೆ `ಇಲ್ಲ~ ಎಂಬುದರ ಪಟ್ಟಿ. ಆದರೆ ಶಿಡ್ಲಘಟ್ಟ ತಾಲ್ಲೂಕು ಮಾದೇನಹಳ್ಳಿ ಅಂತಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಅದಕ್ಕೆ ಅಪವಾದ. ಅದಕ್ಕೆ ಇಲ್ಲಿನ ವಿಶಿಷ್ಟ ಸೌಕರ್ಯ. ಇದು ಮಕ್ಕಳ ಕಲಿಕೆಗೆ ಹಾಗೂ ಪಾಠ ವಿಧಾನಕ್ಕೆ ಸಹಾಯ ಎನ್ನುತ್ತಾರೆ ಶಿಕ್ಷಣ ತಜ್ಞರು.ಅದುವೇ ಕೊಲಂಬಿಯಾ ಮಾದರಿ ಆಸನ ವ್ಯವಸ್ಥೆ. ಇದು ಮಕ್ಕಳ ಬೋಧನ ಪ್ರಕ್ರಿಯೆಗೆ ಹಾಗೂ ಪಾಠಕ್ಕೆ ಹೆಚ್ಚು ಸಹಕಾಯಿ ಎನ್ನುತ್ತಾರೆ ಇಲ್ಲಿನ ಶಿಕ್ಷಕರು. ಈ ಪದ್ಧತಿಯಲ್ಲಿ ಒಬ್ಬ ಶಿಕ್ಷಕ ಮಧ್ಯದಲ್ಲಿ ಕುಳಿತು ತರಗತಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಇದನ್ನು ಕೊಲಂಬಿಯಾದ ಎಸ್ಕಲಾನೋವಾ ಕಲಿಕಾ ಪದ್ಧತಿಯ ಆಸನ ವ್ಯವಸ್ಥೆ ಎಂದು ಕರೆಯುತ್ತಾರೆ.ಶಿಕ್ಷಕರು ಮಕ್ಕಳಿಗೆ ಕಲಿಕಾ ನೆರವು ನೀಡಲು ಇದು ಹೆಚ್ಚು ಸಹಕಾರಿಯಾಗಿದೆ. ನಮ್ಮಲ್ಲಿನ ನಲಿಕಲಿ ಪದ್ಧತಿಗೆ ಸಮ್ಮಿಲನಗೊಂಡಿರುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನುಕೂಲಕರವಾಗಿದೆ. ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಈ ರೀತಿಯ ಆಸನ ವ್ಯವಸ್ಥೆಯನ್ನು ಗಂಜಿಗುಂಟೆ ಕ್ಲಸ್ಟರಿನ ಮಾದೇನಹಳ್ಳಿ, ಬ್ರಾಹ್ಮಣರಹಳ್ಳಿ, ಮಜರಾ ಹೊಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಗಂಜಿಗುಂಟೆಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂಪಿಸಲಾಗಿದೆ. ಇವೆಲ್ಲ ಮಾದರಿ ಸರ್ಕಾರಿ ಶಾಲೆಗಳು ಲಕ್ಷಣ ಎನ್ನುವುದು ಪಾಲಕರ ಅಭಿಪ್ರಾಯ. `35 ಮಕ್ಕಳು ಕೂರಬಲ್ಲ ಈ ರೀತಿಯ ಒಂದು ಆಸನ ವ್ಯವಸ್ಥೆಗೆ 33 ಸಾವಿರ ರೂಪಾಯಿ ಅಗತ್ಯವಿದೆ. ಅಷ್ಟೇ ಮಕ್ಕಳು ಕೂರುವ ಡೆಸ್ಕ್ ಮಾಡಬೇಕಾದರೆ ಕನಿಷ್ಠ  40 ಸಾವಿರ ಎನ್ನುತ್ತಾರೆ ಸಮೂಹ ಸಂಪನ್ಮೂಲ ವ್ಯಕ್ತಿ ಎಲ್.ವಿ.ವೆಂಕಟರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.`ಗುಂಪುಗಳಲ್ಲಿ ಮಕ್ಕಳ ಕಲಿಕೆಗೆ ಪಕ್ಕದಲ್ಲಿ  ಕುಳಿತು ಮಾರ್ಗದರ್ಶನ ಮಾಡಬಹುದು. ಏಕೋಪಾಧ್ಯಾಯ ಶಾಲೆಗಳಲ್ಲಿ ಇದು ಬಹಳ ಅನುಕೂಲಕರ~ ಎಂದು ಮಾದೇನಹಳ್ಳಿಯ ಶಾಲಾ ಶಿಕ್ಷಕ ಬೈರಾರೆಡ್ಡಿ ವಿವರಿಸಿದರು.ಈ ರೀತಿಯ ಆಸನ ವ್ಯವಸ್ಥೆಯಲ್ಲಿ ಡೆಸ್ಕ್‌ನಲ್ಲಿ ಕೂರುವ ಮಕ್ಕಳಿಗಿಂತ ಸುಲಭವಾಗಿ ಶಿಕ್ಷಕ ಮಕ್ಕಳ ಕಲಿಕೆ  ಗಮನಿಸಬಹುದು. ತಮ್ಮ ಕಲಿಕಾಸಾಮಗ್ರಿಗಳನ್ನು ತಾನು ಕುಳಿತ ಆಸನದ  ಅಡಿಯಲ್ಲೇ ಇಡಬಹುದು. ಗ್ರಂಥಾಲಯ ಓದಿಗೂ ಇದು ಅನುಕೂಲಕರ. ಮಕ್ಕಳ ಕಾಲು  ನೋವು, ನೆಲದ ಥಂಡಿ ಮುಂತಾದ ಸಮಸ್ಯೆ ಇರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry