ಇಶಾ ಡಿಯೊಲ್ ನಿಶ್ಚಿತಾರ್ಥ

7

ಇಶಾ ಡಿಯೊಲ್ ನಿಶ್ಚಿತಾರ್ಥ

Published:
Updated:
ಇಶಾ ಡಿಯೊಲ್ ನಿಶ್ಚಿತಾರ್ಥ

ಬಟ್ಟಲು ಕಂಗಳ ಈ ಚೆಲುವೆ ಬಾಲಿವುಡ್‌ಗೆ ಕಾಲಿರಿಸಿದಾಗ ಹೇಮಾ ಮಾಲಿನಿಯ ಮಗಳು ಎಂದೇ ಬಂದಿದ್ದು.  ಮುಗ್ಧ ಕಂಗಳ ಹಿಂದೆ ತುಂಟತನವಿದ್ದರೂ ಚಾಂಚಲ್ಯ ಇರಲಿಲ್ಲ. ಇಶಾ ಡಿಯೊಲ್ ಯಾವುದೇ ಗಾಳಿ ಸುದ್ದಿಗಳಿಗೆ ತುತ್ತಾಗದೇ ಫೆ.12ರಂದು ತಮ್ಮ ಮದುವೆ ನಿಶ್ಚಿತಾರ್ಥದ ತುತ್ತೂರಿ ಊದಿದ್ದಾರೆ.

ಕಳೆದ ವರ್ಷ ಲ್ಯಾಕ್ಮೆ ಫ್ಯಾಶನ್‌ವೀಕ್‌ನಲ್ಲಿ ವಧುವಿನ ಉಡುಗೆಯಲ್ಲಿದ್ದ ಇಶಾಗೆ ಪತ್ರಕರ್ತರು ಅವರ ಕನಸಿನ ಹುಡುಗನ ಬಗ್ಗೆ ಕೆಣಕಿದ್ದರು. ಮದುವೆಯ ಬಗ್ಗೆ ಸಾಲು ಪ್ರಶ್ನೆಗಳನ್ನಿರಿಸಿದ್ದರು.

ತಾವು ಪ್ರೀತಿಸಿಯೇ ಮದುವೆಯಾಗುವುದು. ಆದರೆ ಹಿರಿಯರ ಒಪ್ಪಿಗೆ ಪಡೆದು, ಅವರ ಸಮ್ಮುಖದಲ್ಲಿಯೇ ಎಂದೂ ಉತ್ತರಿಸಿದ್ದರು. ಆದರೆ ಎಲ್ಲಿಯೂ ,ಮುಂಬೈನ ಉದ್ಯಮಿಯೊಬ್ಬರ ಕೈ ಹಿಡಿಯುವುದಾಗಿ ಬಾಯಿ ಬಿಟ್ಟಿರಲಿಲ್ಲ. ಈಗ ಭರತ್ ತಕ್ತಾನಿ ಜೊತೆಗೆ ಉಂಗುರ ಬದಲಿಸಿ, ಜೀವನಪೂರ್ತಿ ಜೊತೆಯಾಗಲಿದ್ದಾರೆ.

ಭರತ್ ಒಳ್ಳೆಯ ಹುಡುಗ. ಇಶಾಳ ಮನ ಕದಿಯುವುದರೊಂದಿಗೆ ಆತ ನಮ್ಮೆಲ್ಲರ ಮನ ಗೆದ್ದಿದ್ದಾನೆ ಎಂದು ಹೇಮಾ ಮಾಲಿನಿಯೂ ಭೇಷ್ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry