ಇಶಾ ಡಿಯೋಲ್ ನಿಶ್ಚಿತಾರ್ಥ

7

ಇಶಾ ಡಿಯೋಲ್ ನಿಶ್ಚಿತಾರ್ಥ

Published:
Updated:

ಮುಂಬೈ (ಪಿಟಿಐ): ಧರ್ಮೇಂದ್ರ ಹಾಗೂ ಹೇಮಾಮಾಲಿನಿ ಅವರ ಮೊದಲ ಪುತ್ರಿ ಇಶಾ ಡಿಯೋಲ್ ಅವರ ವಿವಾಹ ನಿಶ್ಚಿತಾರ್ಥ ವ್ಯಾಪಾರಿ ಭರತ್ ತಖತನಿ ಅವರ ಜೊತೆ ಭಾನುವಾರ ನಡೆದಿದ್ದು, ತಮ್ಮ ಅಳಿಯ `ಆಕರ್ಷಕ ವ್ಯಕ್ತಿ~ ಎಂದು ಹೇಮಾಮಾಲಿನಿ ವರ್ಣಿಸಿದ್ದಾರೆ.`ವಿವಾಹದ ದಿನಾಂಕ ನಿರ್ಧರಿಸಿದ ಮೇಲೆ ನಾವು ಆ ಬಗ್ಗೆ ಅಧಿಕೃತ ಪ್ರಕಟಣೆ ನೀಡುತ್ತೇವೆ~ ಎಂದು ಹೇಮಾಮಾಲಿನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಮುಂಬೈನ ಜುಹುವಿನಲ್ಲಿರುವ ಮಾಜಿ `ಕನಸಿನ ಕನ್ಯೆ~ಯ ಬಂಗಲೆಯಲ್ಲಿ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ, ಕುಟುಂಬ ಸದಸ್ಯರು,  ನಟಿ ಜಯಾ ಬಚ್ಚನ್ ಸೇರಿದಂತೆ ಆಪ್ತೇಷ್ಟರು ಭಾಗವಹಿಸಿದ್ದರು.

`ಭರತ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ~ ಎಂದು ಇಶಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry