ಇಷ್ಟ ಚಿತ್ರದ ಪ್ರಚಾರಕ್ಕೆ ಮೈಸೂರಲ್ಲಿ ಚಾಲನೆ

ಸೋಮವಾರ, ಮೇ 20, 2019
30 °C

ಇಷ್ಟ ಚಿತ್ರದ ಪ್ರಚಾರಕ್ಕೆ ಮೈಸೂರಲ್ಲಿ ಚಾಲನೆ

Published:
Updated:

ಮೈಸೂರು: ಉತ್ತರ ಭಾರತದ ಕುಟುಂಬವೊಂದರ ಕನ್ನಡಪ್ರೇಮದ ಫಲವಾಗಿ ಬೆಳ್ಳಿತೆರೆಗೆ ಬರುತ್ತಿರುವ `ಇಷ್ಟ~ ಚಿತ್ರದ ಪ್ರಚಾರದ ಬಂಡಿಗೆ ಬುಧವಾರ ಮೈಸೂರಿನಲ್ಲಿ ಚಾಲನೆ ಸಿಕ್ಕಿತು.ಆರ್‌ಎಂವಿ ಕಂಬೈನ್ಸ್‌ನ ಲಾಂಛನ ದಲ್ಲಿ ಈ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ವಿಜಯಕುಮಾರ ಛಾಬ್ರಿಯಾ ನಿರ್ಮಾಪಕರಾದರೆ, ಅವರ ಪತ್ನಿ ಇಂದ್ರಾಣಿ ಸಂಗೀತ ನಿರ್ದೇಶಕಿ ಮತ್ತು ಮಗಳು ಭೂಮಿಕಾ ಛಾಬ್ರಿಯಾ ನಾಯಕಿಯಾಗಿದ್ದಾರೆ.ನಗರದ ತುಂಬಾ ಪ್ರಚಾರ ಮಾಡಲಿರುವ ವಾಹನ `ಇಷ್ಟ ಬಂಡಿ~ಗೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.`ಸೆಪ್ಟೆಂಬರ್ 30ರಂದು ನವ ರಾತ್ರಿಯ ಸಂದರ್ಭದಲ್ಲಿಯೇ ಈ ಚಿತ್ರ ಬಿಡುಗಡೆಯಾಗಲಿದೆ. ಡಾ. ರಾಜಕುಮಾರ್ ಅವರ ಅಪ್ಪಟ ಅಭಿ ಮಾನಿಯಾಗಿರುವ ವಿಜಯಕುಮಾರ ಛಾಬ್ರಿಯಾ ಅವರು ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿಯೇ ಇದ್ದಾರೆ. ಇದೀಗ ತಮ್ಮ ಪುತ್ರಿಯನ್ನೇ ನಾಯಕಿಯನ್ನಾಗಿಸಿ ಕನ್ನಡ ಚಿತ್ರವನ್ನು ಅರ್ಪಿಸಿದ್ದಾರೆ~ ಎಂದು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಹಾಜರಿದ್ದ ನಿರ್ಮಾಪಕ ಛಾಬ್ರಿಯಾ, `ವರನಟ ಡಾ. ರಾಜ್ ಅವರ ಅಭಿಮಾನಿ ನಾನು. ಅವರ ಚಿತ್ರಗಳನ್ನು ನೋಡಿಯೇ ಕನ್ನಡ ಕಲಿತಿದ್ದೇನೆ~ ಎಂದರು.ಚಿತ್ರದ ನಾಯಕಿ ಭೂಮಿಕಾ ಮಾತನಾಡಿದರು. ನಿರ್ದೇಶಕ ಆರ್.ಪಿ. ಕೃಷ್ಣ, ಚಿತ್ರದ ನಾಯಕ ಸಂತೋಷ ಶ್ವರಭಿ ಎಂ. ಸಂಜೀವ್, ಮೈಸೂರಿನ ಅಮೋಘ ಚಾನೆಲ್ ಮಾಲೀಕರಾದ ಬಿಳಿಗಿರಿ ರಂಗನಾಥ್ ಮತ್ತಿತರರು ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry