ಸೋಮವಾರ, ಮೇ 23, 2022
28 °C

ಇಸ್ಕಾನ್‌ನಲ್ಲಿ ತೆರೆದುಕೊಂಡ ಬಣ್ಣದ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಣ್ಣ ಮಕ್ಕಳು ರಚಿಸಿದ ಚಿತ್ರಗಳು ಅಲ್ಲಿ ಬಣ್ಣದ ಲೋಕವನ್ನೇ ಅನಾವರಣಗೊಳಿಸಿದ್ದವು. ಬಾಲಕೃಷ್ಣನ ವಿವಿಧ ಹಾವ-ಭಾವಗಳನ್ನು ಚಿತ್ರಿಸಿದ ಮಕ್ಕಳು ಇಡೀ ಆವರಣದಲ್ಲಿ ಗುರುವಾರ ಕಲೆಯ ಕಂಪನ್ನು ಪಸರಿಸಿದರು. ರಾಯಾಪುರದ ಇಸ್ಕಾನ್‌ನಲ್ಲಿ ನಡೆಯುತ್ತಿರುವ ಇಸ್ಕಾನ್ ಸಾಂಸ್ಕೃತಿಕ ಉತ್ಸವದ ಅಂಗವಾಗಿ 1ಮತ್ತು 2ನೇ ತರಗತಿ ಮಕ್ಕಳಿಗಾಗಿ ನಡೆದ ಬಣ್ಣ ತುಂಬುವ ಸ್ಪರ್ಧೆಯಲ್ಲಿ ಕೃಷ್ಣನ ಚಿತ್ರಗಳಿಗೆ ಬಣ್ಣ ತುಂಬಿ ಮಕ್ಕಳು ಖಷಿಪಟ್ಟರು.ಸುಮಾರು 850 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಲ್ಪನಾ ಸಾಮರ್ಥ್ಯವನ್ನು ಪ್ರದರ್ಶಿಸಿದರು.  8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಶಾಸ್ತ್ರೀಯ ನೃತ್ಯ ಸ್ಪರ್ಧೆಯೂ ಗಮನ ಸೆಳೆಯಿತು. ಸುಮಾರು 60 ಪ್ರೌಢಶಾಲೆಗಳ ಮಕ್ಕಳು  ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಕಥೆ ಹೇಳುವ ಸ್ಪರ್ಧೆ ನಡೆಯಿತು. ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಕಥೆ ಹೇಳಿ ರಂಜಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.