ಇಸ್ಕಾನ್ ದೀಪೋತ್ಸವ

7

ಇಸ್ಕಾನ್ ದೀಪೋತ್ಸವ

Published:
Updated:
ಇಸ್ಕಾನ್ ದೀಪೋತ್ಸವ

ಕಾರ್ತಿಕವೆಂದರೆ ದೀಪೋತ್ಸವಗಳ ಪವಿತ್ರ ಮಾಸ. ದೇವಸ್ಥಾನಗಳಲ್ಲಿ, ಪುಷ್ಕರಣಿಗಳಲ್ಲಿ ದೀಪಗಳ ಸಾಲು. ಮೇಲೆ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ಭಕ್ತಿ, ಭಾವದಿಂದ ತೇಲಿ ಬಿಡುವ ದೀಪಗಳಿಂದ ಕಲ್ಯಾಣಿಗಳಲ್ಲಿ ನಕ್ಷತ್ರ ಗೊಂಚಲು.ಇಸ್ಕಾನ್ ರಾಧಾಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಇಂದಿನಿಂದ ನವೆಂಬರ್ 9ರವರೆಗೆ ದೀಪೋತ್ಸವ. ಈ ದಿನಗಳಲ್ಲಿ ಇಸ್ಕಾನ್‌ಗೆ ಭೇಟಿ ನೀಡುವವರು ಭಕ್ತಿ ಸಂಗೀತದ ಹಿನ್ನೆಲೆಯಲ್ಲಿ ರಾಧಾ- ಕೃಷ್ಣರಿಗೆ ತುಪ್ಪದ ದೀಪ ಅರ್ಪಿಸಬಹುದು.ಅ. 25, 26 ಮತ್ತು 27ರಂದು ದೀಪಾವಳಿಯ ಸಂದರ್ಭದಲ್ಲಿ ವಿಶೇಷ ದೀಪೋತ್ಸವ, ಬಾಣ-ಬಿರುಸು ಪ್ರದರ್ಶನವೂ ಇರುತ್ತದೆ. ಮಂಗಳವಾರ ಸಂಜೆ 7 ಗಂಟೆಗೆ ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, 7.45ಕ್ಕೆ ಗಣ್ಯರಿಂದ ಉತ್ಸವ ಉದ್ಘಾಟನೆ, 8 ಗಂಟೆಗೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ನಿತ್ಯವೂ ಇದೇ ರೀತಿ ಕಾರ್ಯಕ್ರಮಗಳು ಜರುಗುತ್ತವೆ.ಸ್ಥಳ: ಇಸ್ಕಾನ್, ಪಶ್ಚಿಮ ಕಾರ್ಡ್ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry