ಸೋಮವಾರ, ಜನವರಿ 20, 2020
19 °C

ಇಸ್ಕಾನ್ ವಿವಾದ: ಫೆ.16ಕ್ಕೆ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಬೆಂಗಳೂರಿನಲ್ಲಿರುವ ಬಹುಕೋಟಿ ಮೌಲ್ಯದ ಭವ್ಯ ಇಸ್ಕಾನ್ ಮಂದಿರದ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಫೆಬ್ರುವರಿ 16ರಂದು ನಡೆಯಲಿದೆ.1997ರಲ್ಲಿ ಕಟ್ಟಿದ ಈ ಮಂದಿರ, ಇಸ್ಕಾನ್ ಸಂಸ್ಥೆಯ ಬೆಂಗಳೂರು ಶಾಖೆಗೆ ಸೇರಿದ್ದೋ ಅಥವಾ ಮುಂಬೈ ಶಾಖೆಗೋ ಎನ್ನುವುದನ್ನು ನಿರ್ಧರಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.2001ರಲ್ಲಿ ಮೊದಲು ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಈ ಪ್ರಕರಣ, ಕಳೆದ ಮೇ ತಿಂಗಳಿನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಮೂಲಕ  ಸುಪ್ರೀಂಕೋರ್ಟ್ ಮುಂದೆ ಬಂದಿದೆ.

 

ಪ್ರತಿಕ್ರಿಯಿಸಿ (+)