ಸೋಮವಾರ, ಮೇ 17, 2021
21 °C

ಇಸ್ರೇಲ್ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿ ಹೈ ಕೋರ್ಟ್ ಮೇಲೆ ನಡೆದ ಬಾಂಬ್ ದಾಳಿ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಇಸ್ರೇಲ್, ದುಷ್ಕೃತ್ಯವನ್ನು ಕಟುವಾಗಿ ಖಂಡಿಸಿದೆ. `ಸಂತಸ ಹಾಗೂ ದುಃಖ- ಎರಡೂ ಸನ್ನಿವೇಶಗಳಲ್ಲಿ ಭಾರತ ಮತ್ತು ಇಸ್ರೇಲ್ ಸಹೋದರತ್ವದಂತಹ ಸಂಬಂಧ ಹೊಂದಿವೆ.



ಅಂತಿಮವಾಗಿ ಭಾರತದ ಜನತೆ ಹಾಗೂ ಸರ್ಕಾರ ಇಂತಹ ದಾಳಿಗಳನ್ನು ಮೆಟ್ಟಿ ನಿಲ್ಲಲಿದೆ~ ಎಂದು ಭಾರತಕ್ಕೆ ಭೇಟಿ ನೀಡಿರುವ ಇಸ್ರೇಲ್ ಪ್ರವಾಸೋದ್ಯಮ ಸಚಿವ ಸ್ಟ್ಯಾಸ್ ಮಿಸೆಝ್ನಿಕೊವ್ ಹೇಳಿದ್ದಾರೆ.

ಪಾತಕಿಗಳು ಮಾತ್ರ ಸಮಾನತೆಯ ದೇಗುಲವಾದ ನ್ಯಾಯಾಲಯದ ಮೇಲೆ ದಾಳಿ ಎಸಗುತ್ತಾರೆ ಎಂದೂ ಅವರು ಖಂಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.