ಇಸ್ರೇಲ್ ಬೇಹುಗಾರನಿಗೆ ನೇಣು

7

ಇಸ್ರೇಲ್ ಬೇಹುಗಾರನಿಗೆ ನೇಣು

Published:
Updated:

ಟೆಹರಾನ್ (ಎಪಿ): ಭೌತವಿಜ್ಞಾನಿಯೊಬ್ಬರನ್ನು ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಇರಾನ್‌ನಲ್ಲಿ ಮಂಗಳವಾರ ಗಲ್ಲಿಗೇರಿಸಲಾಗಿದೆ.

ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಇಸ್ರೇಲ್ ಬೇಹುಗಾರ ಮಜಿದ್ ಜಾಮಾಲಿ ಫಾಸಿ ಎಂದು ಗುರುತಿಸಲಾಗಿದ್ದು, ಈತ 2010ರ ಜನವರಿಯಲ್ಲಿ  ಟೆಹರಾನ್ ವಿಶ್ವವಿದ್ಯಾಲಯದ ಭೌತವಿಜ್ಞಾನಿ ಮಸೂದ್ ಅಲಿ ಮೊಹಮದ್ ಎಂಬುವರನ್ನು ಅವರ ಮನೆ ಮುಂಭಾಗ ಮೋಟಾರ್ ಸೈಕಲ್‌ನಲ್ಲಿ  ಬಾಂಬ್ ಇರಿಸಿ ಸ್ಫೋಟಿಸಿ ಕೊಂದ ಆರೋಪ ಎದುರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಫಾಸಿಯನ್ನು ಮಂಗಳವಾರ ಮುಂಜಾನೆ ನೇಣಿಗೆ ಏರಿಸಲಾಯಿತು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry