ಇಸ್ರೇಲ್ ಸಂಸತ್ ಚುನಾವಣೆ ರದ್ದು

7

ಇಸ್ರೇಲ್ ಸಂಸತ್ ಚುನಾವಣೆ ರದ್ದು

Published:
Updated:

ಜೆರುಸಲೇಂ (ಪಿಟಿಐ): ನಾಟಕೀಯ ಬೆಳವಣಿಗೆ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಅವಧಿಪೂರ್ವ ನಡೆಯಬೇಕಾಗಿದ್ದ ಚುನಾವಣೆಯನ್ನು ರದ್ದುಪಡಿಸಿದ್ದಾರೆ.ಪ್ರಮುಖ ಪ್ರತಿಪಕ್ಷವಾದ ಕದಿಮಾ ಪಕ್ಷದ ಜತೆ ಆಶ್ಚರ್ಯಕರ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹಿಂದೆಂದೂ ಇಲ್ಲದ ಅತಿ ದೊಡ್ಡ ಸಮ್ಮಿಶ್ರ ಸರ್ಕಾರ ರಚಿಸಿಕೊಂಡು ಪ್ಯಾಲೆಸ್ಟೈನ್ ಜತೆ ಶಾಂತಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.ಈ ವರ್ಷ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಸಲಾಗುವುದು ಎಂದು ನೆತಾನ್ಯಾಹು ಈ ಮೊದಲು ಪ್ರಕಟಿಸಿದ್ದರು. ಆದರೆ ಈಗ ಪ್ರತಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ರದ್ದುಪಡಿಸಿದ್ದಾರೆ.

ಸಂಸತ್ತಿನ ಅವಧಿ ಮುಗಿದ ಮೇಲೆ ಚುನಾವಣೆ ನಡೆಸುವ ಉದ್ದೇಶವಿತ್ತು.

 

ಆದರೆ ಅಸ್ಥಿರತೆ ತಲೆದೋರುವ ಲಕ್ಷಣಗಳು ಕಂಡುಬಂದಿದ್ದರಿಂದ ಅವಧಿಪೂರ್ವ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ನಂತರ ಪ್ರಮುಖ ವಿರೋಧ ಪಕ್ಷವು ಸರ್ಕಾರದಲ್ಲಿ ಸೇರಲು ಒಪ್ಪಿಕೊಂಡಿದ್ದರಿಂದ ಚುನಾವಣೆಯನ್ನು ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ನೆತಾನ್ಯಾಹು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry