ಇಸ್ರೊ: ಪ್ರಧಾನಿ ಸಿಂಗ್ ಮೌನಕ್ಕೆ ಬಿಜೆಪಿ ಟೀಕೆ

7

ಇಸ್ರೊ: ಪ್ರಧಾನಿ ಸಿಂಗ್ ಮೌನಕ್ಕೆ ಬಿಜೆಪಿ ಟೀಕೆ

Published:
Updated:

ನವದೆಹಲಿ/ಚೆನ್ನೈ (ಪಿಟಿಐ): ಇಸ್ರೊದ ಅಂತರಿಕ್ಷ್- ದೇವಾಸ್ ನಡುವಿನ ವಿವಾದಾತ್ಮಕ ಒಪ್ಪಂದ ಕುರಿತು ಪ್ರಧಾನಿ ಮೌನ ಮುರಿದು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.ಆದರೆ `ಇದು ಕಾನೂನಿಗೆ ಸಂಬಂಧಪಟ್ಟ ವಿಷಯವಾಗಿದ್ದು, ರಾಜಕೀಯಕ್ಕೆ ಬಳಸಿಕೊಳ್ಳಬಾರದು~ ಎಂದು ಕಾಂಗ್ರೆಸ್ ಹೇಳಿದೆ.ಇಸ್ರೊ- ದೇವಾಸ್ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಧಾನಿ ಎರಡು ಉನ್ನತಾಧಿಕಾರ ಸಮಿತಿಗಳನ್ನು ತನಿಖೆಗೆ ರಚನೆ ಮಾಡಿದ್ದಾರೆ. ಈ ಸಮಿತಿಗಳು ನೀಡಿರುವ ವರದಿಗಳ ಬಗ್ಗೆ ಮಾಹಿತಿ ಇಲ್ಲ. ಜತೆಗೆ ಪ್ರಧಾನಿ ಸಹ ಮೌನಕ್ಕೆ ಶರಣಾಗಿದ್ದಾರೆ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಚೆನ್ನೈನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಕೋಲ್ಕತ್ತ ವರದಿ (ಐಎಎನ್‌ಎಸ್): ಇಸ್ರೊ-ದೇವಾಸ್ ಹಗರಣದ ತನಿಖೆ ನಡೆಸಿರುವ ಸಮಿತಿಗಳ ವರದಿ ಬಗ್ಗೆ ಟೀಕೆ ಮಾಡಲು ಮಾಧವನ್ ನಾಯರ್ ಸ್ವತಂತ್ರರು. ಸರ್ಕಾರ ಇದೇ ರೀತಿ ನಡೆದುಕೊಳ್ಳಬೇಕು ಎಂದು ತಾಕೀತು ಮಾಡುವ ಅಧಿಕಾರ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry