ಇಸ್ರೋ: ಸರ್ಕಾರಿ ಕ್ರಮ ಪ್ರತಿಭಟಿಸಿ ಹಿರಿಯ ವಿಜ್ಞಾನಿ ರೊದ್ದಂ ರಾಜೀನಾಮೆ

7

ಇಸ್ರೋ: ಸರ್ಕಾರಿ ಕ್ರಮ ಪ್ರತಿಭಟಿಸಿ ಹಿರಿಯ ವಿಜ್ಞಾನಿ ರೊದ್ದಂ ರಾಜೀನಾಮೆ

Published:
Updated:
ಇಸ್ರೋ: ಸರ್ಕಾರಿ ಕ್ರಮ ಪ್ರತಿಭಟಿಸಿ ಹಿರಿಯ ವಿಜ್ಞಾನಿ ರೊದ್ದಂ ರಾಜೀನಾಮೆ

ಬೆಂಗಳೂರು (ಐಎಎನ್ಎಸ್): ಬಾಹ್ಯಾಕಾಶ ಆಯೋಗದ ಅತ್ಯಂತ ಹಿರಿಯ ಸದಸ್ಯ ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ಅವರು ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಸೇರಿದಂತೆ ಮೂವರು ವಿಜ್ಞಾನಿಗಳನ್ನು ಅಂತರಿಕ್ಷ - ದೇವಾಸ್ ಒಪ್ಪಂದದ ಹಿನ್ನೆಲೆಯಲ್ಲಿ ~ಕಪ್ಪು ಪಟ್ಟಿ~ಗೆ ಸೇರಿಸಿದ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.~ನರಸಿಂಹ ಅವರು ನೇರವಾಗಿ ಪ್ರಧಾನಿ ಸಚಿವಾಲಯಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದರಿಂದ, ಅವರು ಯಾಕೆ ರಾಜೀನಾಮೆ ನೀಡಲು ನಿರ್ಧರಿಸಿದರು ಎಂಬ ಬಗ್ಗೆ ನಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಆದರೆ ನಾಲ್ಕು ಮಂದಿ ಉನ್ನತ ಬಾಹ್ಯಾಕಾಶ ವಿಜ್ಞಾನಿಗಳ ವಿರುದ್ಧದ ಇತ್ತೀಚಿನ ಸರ್ಕಾರಿ ಕ್ರಮದಿಂದ ಅವರು ಚಿಂತಿತರಾಗಿದ್ದರು ಎಂಬುದು ನಮ್ಮ ಅರಿವಿಗೆ ಬಂದಿತ್ತು ಎಂದು ಹೆಸರು ಹೇಳಬಯಸದ ಇಸ್ರೋ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.78ರ ಹರೆಯದ ನರಸಿಂಹ ಅವರು ಸರ್ಕಾರಿ ಸ್ವಾಮ್ಯದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಅದರ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry