ಇಸ್ರೋ 100 `ಮಿಷನ್'

7

ಇಸ್ರೋ 100 `ಮಿಷನ್'

Published:
Updated:

`ಇಸ್ರೋ'ದ ವಿಸ್ತೃತ ರೂಪವೇನು?

`ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್'ನ ಸಂಕ್ಷಿಪ್ತ ರೂಪವೇ `ಇಸ್ರೋ' (ಐಎಸ್‌ಆರ್‌ಒ). ಅದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ.

ಅದು ಸ್ಥಾಪಿತವಾದದ್ದು ಯಾವಾಗ?

1969ರಲ್ಲಿ ಬೆಂಗಳೂರಿನಲ್ಲಿ ಅದು ಸ್ಥಾಪಿತವಾಯಿತು.

ಇಸ್ರೋ ಉಡಾವಣೆ ಮಾಡಿದ ಮೊದಲ ಉಪಗ್ರಹ ಯಾವುದು?

ಇಸ್ರೋ ಅಭಿವೃದ್ಧಿಪಡಿಸಿದ ಮೊದಲ ಉಪಗ್ರಹದ ಹೆಸರು ಆರ್ಯಭಟ. ಸೋವಿಯತ್ ಯೂನಿಯನ್ ಅದನ್ನು ಏಪ್ರಿಲ್ 9, 1975ರಲ್ಲಿ ರಷ್ಯಾದ ವೋಲ್ಗೋಗ್ರ್ಯಾಡ್ ಲಾಂಚ್ ಸ್ಟೇಷನ್‌ನಲ್ಲಿ ಉಡಾವಣೆ ಮಾಡಿತು. ಅದಾದ ಐದು ವರ್ಷಗಳ ನಂತರ ರೋಹಿಣಿ ಸರಣಿಯ ಪ್ರಾಯೋಗಿಕ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿತು. ಅದಕ್ಕಾಗಿ ತನ್ನದೇ ಗಗನನೌಕೆ ಬಳಸಿದ್ದು ವಿಶೇಷ. ಅದರ ಹೆಸರು ಎಸ್‌ಎಲ್‌ವಿ-3. ಆಂಧ್ರದ ಶ್ರೀಹರಿಕೋಟಾದಲ್ಲಿ ಉಡಾವಣೆ ಮಾಡಲಾಯಿತು.ಇಸ್ರೋದ ಪ್ರಮುಖ ಸಾಧನೆಗಳು ಯಾವುವು?

ಅದು ತನ್ನದೇ ಗಗನನೌಕೆಗಳು ಹಾಗೂ ಉಪಗ್ರಹಗಳನ್ನು ಅಭಿವೃದ್ಧಿಪಡಿಸಿತು. 2008ರಲ್ಲಿ ಅದು `ಚಂದ್ರಯಾನ-1' ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅದಲ್ಲದೆ ಮುಂದಿನ ದಿನಗಳಲ್ಲಿ `ಚಂದ್ರಯಾನ-2' ಹಾಗೂ ಮಂಗಳ, ಶುಕ್ರ ಗ್ರಹಗಳಿಗೆ ಮಾನವರಹಿತ ಗಗನನೌಕೆಗಳನ್ನು ಉಡಾವಣೆ ಮಾಡುವ ಯೋಜನೆಗಳನ್ನೂ ಇಸ್ರೋ ಹಾಕಿಕೊಂಡಿದೆ.

ಇಸ್ರೋದ 100ನೇ ಕಾರ್ಯಾಚರಣೆ ಯಾವುದು?

ಶ್ರೀಹರಿಕೋಟಾದಲ್ಲಿ `ಪಿಎಸ್‌ಎಲ್‌ವಿ-21' ಗಗನನೌಕೆಯು ಎರಡು ವಿದೇಶಿ ಉಪಗ್ರಹಗಳನ್ನು ಹೊತ್ತೊಯ್ದಿತು. ಫ್ರಾನ್ಸ್‌ನ 720 ಕೆ.ಜಿ. ತೂಕದ `ಸ್ಪಾಟ್- 6' ಅದು ಹೊತ್ತೊಯ್ದ ಭಾರತದಲ್ಲೇ ಇದುವರೆಗಿನ ಅತಿ ಹೆಚ್ಚು ತೂಕದ ಉಪಗ್ರಹ. ಇನ್ನೊಂದು ಜಪಾನಿನ ಸಣ್ಣ ಉಪಗ್ರಹ `ಪ್ರೊಯ್ಟರಸ್'. ಅದು 15 ಕೆ.ಜಿ. ತೂಕದ್ದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry