ಶುಕ್ರವಾರ, ಮೇ 7, 2021
27 °C

ಇಸ್ಲಾಂ ವಿರುದ್ಧವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): `ಅಮೆರಿಕದ ಹೋರಾಟ ಭಯೋತ್ಪಾದನೆಯ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ~ ಎಂದು ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ.9/11ದಾಳಿ ನೆನಪಿನ ಅಂಗವಾಗಿ ನ್ಯೂಯಾರ್ಕ್‌ನ ಕೆನಡಿ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಒಬಾಮ,  ಉಗ್ರರ ದಾಳಿಗೆ ತುತ್ತಾದ ನ್ಯೂಯಾರ್ಕ್‌ನ ಅವಳಿ ಗೋಪುರಗಳ ಸ್ಥಳವನ್ನು ಸ್ಮಾರಕವಾಗಿಸಲಾಗುವುದು. ಇದು ಅಮೆರಿಕದಲ್ಲಿರುವ ಎಲ್ಲ ಜನಾಂಗ ಮತ್ತು ಧರ್ಮದವರು ಒತ್ತಾಸೆಯಾಗಿದೆ ಎಂದು ಅವರು ಹೇಳಿದ್ದಾರೆ.ಅಪಘಾತ: 19 ಸಾವು

ಜಕಾರ್ತಾ, (ಎಪಿ): ಕೇಂದ್ರ ಇಂಡೊನೇಷ್ಯಾದ ಬಲಪನಗ್ಮೊಜೊ ಗ್ರಾಮದಲ್ಲಿ  ಸೋಮವಾರ ಮಿನಿವ್ಯಾನ್ ಹಾಗೂ ಬಸ್ ಪರಸ್ಪರ ಡಿಕ್ಕಿ  ಹೊಡೆದು 19 ಜನರು ಮೃತಪಟ್ಟಿದ್ದಾರೆ.   ಇನ್ನಿತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಐವರಿಗೆ ನೇಣು

ಟೆಹರಾನ್ (ಎಪಿಎಫ್): ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಶಹ್ರೌದ್ ನಗರದ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಐವರನ್ನು ಸೋಮವಾರ ನೇಣಿಗೆ ಹಾಕಲಾಗಿದೆ ಎಂದು ವರದಿಯಾಗಿದೆ. ಪ್ರಸಕ್ತ ವರ್ಷ ಇರಾನ್‌ನಲ್ಲಿ 192 ಮಂದಿಯನ್ನು ಮತ್ತು ಕಳೆದ ವರ್ಷ 179 ಮಂದಿಯನ್ನು ಗಲ್ಲಿಗೇರಿಸಲಾಗಿದೆ.  2010ನೇ ಸಾಲಿನಲ್ಲಿ ಗಲ್ಲಿಗೇರಿಸುವ ರಾಷ್ಟ್ರಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಇರಾನ್ ದ್ವಿತೀಯ ಸ್ಥಾನದಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.