ಇ-ಬುಕ್ ಓದಲು ಹೊಸ ತಂತ್ರಜ್ಞಾನ

7

ಇ-ಬುಕ್ ಓದಲು ಹೊಸ ತಂತ್ರಜ್ಞಾನ

Published:
Updated:
ಇ-ಬುಕ್ ಓದಲು ಹೊಸ ತಂತ್ರಜ್ಞಾನ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್ ಪಿ.ಸಿಗಳನ್ನು ಈಗಿನದಕ್ಕಿಂತಲೂ ಬಹಳ ಸುಲಭವಾಗಿ ಓದುವ ಹೊಸ ತಂತ್ರಜ್ಞಾನವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.ಕೊರಿಯಾ ಅಡ್ವಾನ್ಸ್‌ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಕೆಎಐಎಸ್‌ಟಿ)ಯ ಹೊವೋನ್ ಲೀ ನೇತೃತ್ವದ ತಂಡ `ಸ್ಮಾರ್ಟ್ ಇ-ಬುಕ್ ಸಿಸ್ಟಮ್~ ಎನ್ನುವ ಈ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದು, ಇದರಿಂದ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಇನ್ನಷ್ಟು ಸುಲಭವಾಗಲಿದೆ.ಇದರಿಂದಾಗಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಪಿ.ಸಿ ಬಳಕೆದಾರರು `ಇ-ಪುಸ್ತಕ~ದ ಪುಟಗಳನ್ನು ಆರಾಮವಾಗಿ ತಿರುವಿ ಹಾಕಬಹುದಲ್ಲದೆ ಸಾಧಾರಣ ಪುಸ್ತಕ ಮತ್ತು ನಿಯತಕಾಲಿಕಗಳಲ್ಲಿ ಮಾಡುವಂತೆ ಇದರಲ್ಲಿನ ಮಾಹಿತಿಗಳನ್ನು ಮರುಪರಿಶೀಲನೆ ನಡೆಸಬಹುದಾಗಿದೆ. ಅಷ್ಟೇ ಅಲ್ಲದೆ ಸಾಂಪ್ರದಾಯಿಕ ರೀತಿ ಹೊರತುಪಡಿಸಿ ಈ ಹೊಸ ತಂತ್ರಜ್ಞಾನವು ಪರದೆಯ ಹಿಂದಿನ ಬೆರಳಿನ ಸ್ಪರ್ಶವನ್ನೂ ಗುರುತಿಸುತ್ತದೆ.ಹಾಗಾಗಿ `ಇ-ಪುಸ್ತಕ~ ಬಳಸುವವರು ಯಾವುದೇ ಕೀಲಿಮಣೆಯ ಯಾವುದೇ ಕೀಗಳನ್ನು  ಬಳಸದೆ ಅಥವಾ ಪರದೆಯನ್ನು ಸ್ಪರ್ಶಿಸದೇ ನೇರವಾಗಿ ಸ್ಟಾರ್ಟ್-ಅಪ್ ಪರದೆಯಿಂದಲೇ `ಇ-ಬುಕ್~ನ ಪುಟಗಳನ್ನು ತಿರುವಿ ಹಾಕಬಹುದಾಗಿದೆ.ಇದೇ ರೀತಿ `ಇ-ಪುಸ್ತಕ~ದಲ್ಲಿನ ಬುಕ್‌ಮಾರ್ಕ್ ಸೌಲಭ್ಯವು ಗ್ರಾಹಕರಿಗೆ ಇಚ್ಛೆ ಬಂದಾಗ ಹಿಂದಕ್ಕೆ ಹೋಗುವ ಮತ್ತು ಇಷ್ಟವಾದ ಪುಟಗಳನ್ನು ಆರಿಸುವ ಸೌಲಭ್ಯವನ್ನೂ ಒಳಗೊಂಡಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry