ಭಾನುವಾರ, ಮೇ 16, 2021
22 °C

ಇ-ಸ್ಟ್ಯಾಂಪ್ ಕಾಗದ ಕೊರತೆ, ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇ-ಸ್ಟ್ಯಾಂಪ್ ಕಾಗದ ಕೊರತೆ, ಜನರ ಪರದಾಟ

ಚಿತ್ರದುರ್ಗ: ನಗರದಲ್ಲಿ ಇ-ಸ್ಟ್ಯಾಂಪ್‌ಕಾಗದಗಳ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಬ್ಯಾಂಕ್‌ಗಳ ಮುಂದೆ ಇಡೀ ದಿನ ಸಾಲಿನಲ್ಲಿ ನಿಂತು ಪಡೆಯುವ ಪರಿಸ್ಥಿತಿ ಉಂಟಾಗಿದೆ. ಪ್ರತಿನಿತ್ಯ ಸಮಸ್ಯೆ ಬಿಗಡಾಯಿಸುತ್ತಿದ್ದರೂ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ.ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪ್ರಮಾಣಪತ್ರದ ದಾಖಲೆ ಅಗತ್ಯವಾಗಿದ್ದು, ಇದಕ್ಕಾಗಿ ಇ-ಸ್ಟ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸಕಾಲಕ್ಕೆ, ಸಮರ್ಪಕವಾಗಿ ವಿತರಿಸುವ ವ್ಯವಸ್ಥೆಯಾಗಿಲ್ಲ.ಪ್ರಸ್ತುತ ನಗರದಲ್ಲಿ ಮರ್ಚೆಂಟ್ ಸೌಹಾರ್ದ ಬ್ಯಾಂಕ್ ಮತ್ತು ಕನ್ನಿಕಾ ಸಹಕಾರ ಬ್ಯಾಂಕ್ ಹಾಗೂ ಮುಖ್ಯ ಅಂಚೆ ಕಚೇರಿಯಲ್ಲಿ ಇ-ಸ್ಟ್ಯಾಂಪ್ ವಿತರಿಸಲಾಗುತ್ತಿದೆ. ಆದರೆ, ಸಾರ್ವಜನಿಕರ ಬೇಡಿಕೆ ತಕ್ಕಂತೆ ಅರ್ಜಿಗಳನ್ನು ಇಲ್ಲಿ ವಿತರಿಸುತ್ತಿಲ್ಲ.ಈ ಬ್ಯಾಂಕ್‌ಗಳು ಪ್ರತಿದಿನ ಕೇವಲ 100ರಿಂದ 150 ಅರ್ಜಿಗಳನ್ನು ಮಾತ್ರ ವಿತರಿಸುತ್ತಿವೆ. ಆದರೆ, ಚಿತ್ರದುರ್ಗ ತಾಲ್ಲೂಕಿನಲ್ಲೇ ಕನಿಷ್ಠ ಎರಡು ಸಾವಿರ ಇ-ಸ್ಟ್ಯಾಂಪಿಂಗ್ ಅರ್ಜಿಗಳು ಬೇಕು. ಕೇವಲ ನೂರು ಅರ್ಜಿಗಳನ್ನು ವಿತರಿಸಿದರೆ ಉಳಿದವರು ಎಲ್ಲಿಗೆ ಹೋಗಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಪ್ರಶ್ನಿಸಿದ್ದಾರೆ.ಈ ಮೊದಲು ್ಙ 500 ತನಕ ಛಾಪಾ ಕಾಗದಕ್ಕೆ ್ಙ 5 ಪಡೆಯಲಾಗುತ್ತಿದೆ. ಆದರೆ, ಈಗ ್ಙ 20 ಅರ್ಜಿಗೆ ್ಙ 12 ಕಮಿಷನ್ ಪಡೆಯಲಾಗುತ್ತಿದೆ. ಹೆಚ್ಚಿನ ಮೊತ್ತದ ಅರ್ಜಿಗೆ ಕಮಿಷನ್ ಏರಿಕೆಯಾಗುತ್ತಾ ಹೋಗುತ್ತದೆ. ಇದರಿಂದ ಬಡವರಿಗೆ, ರೈತರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಕಮಿಷನ್ ಪ್ರಮಾಣವನ್ನು ಕಡಿತಗೊಳಿಸಬೇಕು ಎನ್ನುವುದು ನಾಗರಿಕರ ಆಗ್ರಹ.ಈ ಅರ್ಜಿಗಳನ್ನು ವಿತರಿಸಲು ಬ್ಯಾಂಕ್‌ನವರು ಹೆಚ್ಚಿನ ಸಿಬ್ಬಂದಿ ನಿಯೋಜಿಸದಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಕನಿಷ್ಠ ಮೂವರು ಸಿಬ್ಬಂದಿ ಈ ಕಾರ್ಯಕ್ಕೆ ಬೇಕು. ಜತೆಗೆ ಇ-ಸ್ಟ್ಯಾಂಪ್ ಎಲ್ಲ ವಿವರಗಳು ಇಂಗ್ಲಿಷ್‌ನಲ್ಲಿರುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಕಷ್ಟವಾಗುತ್ತಿದೆ. ಆದ್ದರಿಂದ, ಈ ಮೊದಲು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿದ್ದ ವ್ಯವಸ್ಥೆಯನ್ನೇ ಮತ್ತೆ ಜಾರಿಗೊಳಿಸಬೇಕು ಎನ್ನುವುದು ನಾಗರಿಕರ ಒತ್ತಾಯ.ಅರ್ಜಿಗಳನ್ನು ವಿತರಿಸಲು ಇನ್ನೂ ಎರಡು ಬ್ಯಾಂಕ್‌ಗಳಲ್ಲಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಭರಮಸಾಗರದಲ್ಲಿ ಇ-ಸ್ಟ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಇ-ಸ್ಟ್ಯಾಂಪ್ ವಿತರಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯವಿರುವಷ್ಟು ಇ-ಸ್ಟ್ಯಾಂಪ್‌ಗಳನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುತ್ತಿದೆ ನೋಂದಣಾಧಿಕಾರಿಗಳು ಹೇಳುತ್ತಾರೆ.ತ್ವರಿತಗತಿಯಲ್ಲಿ ಇ-ಸ್ಟ್ಯಾಂಪ್‌ಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ವ್ಯವಸ್ಥೆಯಾಗಬೇಕು. ಈ ಮೂಲಕ ಗ್ರಾಮಾಂತರ ಪ್ರದೇಶದ ಮತ್ತು ಬಡಜನತೆಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಾಗರಿಕರ ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.