ಈಕ್ವೆಸ್ಟ್ರಿಯನ್: ಆದಿತ್ಯಗೆ ಚಿನ್ನ

7

ಈಕ್ವೆಸ್ಟ್ರಿಯನ್: ಆದಿತ್ಯಗೆ ಚಿನ್ನ

Published:
Updated:

ಬೆಂಗಳೂರು: ಮೀರತ್‌ನ ಆರ್‌ವಿಸಿ ಮತ್ತು ಸೆಂಟರ್‌ನ ಆದಿತ್ಯ ಕುಮಾರ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಷಿಪ್‌ನ ವೈಯಕ್ತಿಕ `ಜೂನಿಯರ್ ಜಂಪಿಂಗ್ ನಾರ್ಮಲ್' ವಿಭಾಗದಲ್ಲಿ ಅಗ್ರಸ್ಥಾನದೊಂದಿಗೆ ಬಂಗಾರ ಜಯಿಸಿದರು.ಅಗರಮ್ ಮೈದಾನದಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ಆದಿತ್ಯ ನಾಲ್ಕು ಪೆನಾಲ್ಟಿಗಳೊಂದಿಗೆ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡರು. ಎಂಬೆಸಿ ಇಂಟರ್‌ನ್ಯಾಷನಲ್ ರೈಡಿಂಗ್ ಸ್ಕೂಲ್‌ನ ಯಹಾವಿ ಮರಿವಾಲಾ (8 ಪೆನಾಲ್ಟಿ) ಎರಡನೇ ಸ್ಥಾನ ಪಡೆದರೆ, ಸಿಲ್ವರ್ ಸ್ಪರ್ಸ್‌ ಅಕಾಡೆಮಿಯ ಕೀವನ್ ಸೆಟಲ್ವಾಡ್ (16 ಪೆನಾಲ್ಟಿ) ಕಂಚಿನ ಪದಕ ಗೆದ್ದುಕೊಂಡರು.`ಜೂನಿಯರ್ ಜಂಪಿಂಗ್ ನಾರ್ಮಲ್' ವಿಭಾಗದ ಬೆಂಗಳೂರು ಹಾರ್ಸ್ ಶೋ ಸ್ಪರ್ಧೆಯಲ್ಲಿ ಆರ್ಯ ಠಾಕೂರ್ ಬಂಗಾರ ಪಡೆದರು. `ಆ್ಯಂಡಿ ಫ್ಲವರ್' ಹೆಸರಿನ ಕುದುರೆಯೊಂದಿಗೆ ಸ್ಪರ್ಧಿಸಿದ ಆರ್ಯ ಎಲ್ಲ ಜಂಪ್‌ಗಳನ್ನೂ ಯಶಸ್ವಿಯಾಗಿ ದಾಟಿದರು. ಆರ್‌ವಿಸಿ ಮತ್ತು ಸೆಂಟರ್‌ನ ರಾಜೀವ್ ಕುಮಾರ್ ನಾಲ್ಕು ಪೆನಾಲ್ಟಿಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಮನ್ವೀರ್ ಸಿಂಗ್ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry