ಈಕ್ವೇಸ್ಟ್ರಿಯನ್: ಅಗ್ರಸ್ಥಾನದಲ್ಲಿ ಅನಂತ್ಯಾ

7

ಈಕ್ವೇಸ್ಟ್ರಿಯನ್: ಅಗ್ರಸ್ಥಾನದಲ್ಲಿ ಅನಂತ್ಯಾ

Published:
Updated:

ಬೆಂಗಳೂರು: ಅನಂತ್ಯಾ ಸಾಹ್ನಿ   ಎಎಸ್‌ಸಿ ಮತ್ತು ಕಾಲೇಜು ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಕ್ವೇಸ್ಟ್ರಿಯನ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಅಗ್ರಸ್ಥಾನ ಗಳಿಸಿದರು.ಉದ್ಯಾನನಗರಿಯಲ್ಲಿರುವ ಎಎಸ್‌ಸಿ ಅಗರಮ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಡುಬಿಸಿಸಲ್ ಕುದುರೆಯೊಂದಿಗೆ ಪೈಪೋಟಿ ನಡೆಸಿದ ಅನಂತ್ಯಾ 33.87 ಪೆನಾಲ್ಟಿ ಕಲೆಹಾಕಿ ಅಗ್ರಸ್ಥಾನ ಕಾಯ್ದುಕೊಂಡರು. 34.34 ಪೆನಾಲ್ಟಿಗಳಿಂದ ಆ್ಯಂಡಿ ಫ್ಲವರ್ ಕುದುರೆಯೊಂದಿಗೆ ಪೈಪೋಟಿ ನಡೆಸಿದ ಆರ್ಯ ಆರ್.ಠಾಕೂರ್ (ವೈಯಕ್ತಿಕ) ದ್ವಿತೀಯ ಸ್ಥಾನ ಪಡೆದರು. `ಬೆಂಗಳೂರು ಕುದುರೆ ಪ್ರದರ್ಶನ'ದ ಜಂಪಿಂಗ್ ಸ್ಪರ್ಧೆಯ ತಂಡ ವಿಭಾಗದಲ್ಲಿ ಎಸ್.ಕೆ. ದಹಿಯಾ ಮೊದಲ ಸ್ಥಾನ ಪಡೆದರು. ಪ್ರಿನ್ಸ್ ಕುರಿಯನ್, ಲೆಫ್ಟಿನೆಂಟ್ ಎಂ.ಎಸ್. ಸೋಧಿ, ಆರ್.ಎಲ್. ಮಾಲಿ ಹಾಗೂ ದಹಿಯಾ ಅವರನ್ನೊಳಗೊಂಡ ತಂಡ ಅಗ್ರಸ್ಥಾನ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry