ಈಗಿರುವ ಮಾದರಿಯೇ ಉತ್ತಮ

7

ಈಗಿರುವ ಮಾದರಿಯೇ ಉತ್ತಮ

Published:
Updated:

ಮುಂಬೈ (ಐಎಎನ್‌ಎಸ್): ಏಕದಿನ ಕ್ರಿಕೆಟ್ ಪಂದ್ಯದ ಮಾದರಿ ಈಗಿರುವ ಹಾಗೆಯೇ ಮುಂದುವರಿಯಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ ಸಚಿನ್ ತೆಂಡೂಲ್ಕರ್ ಇತ್ತೀಚಿಗೆ ಐಸಿಸಿಗೆ ಪತ್ರ ಬರೆದಿದ್ದರು. ಆದರೆ, ಸಚಿನ್ ಪ್ರಸ್ತಾವವನ್ನು ಐಸಿಸಿ ತಿರಸ್ಕರಿಸಿತ್ತು.ಈಗಿರುವ ಮಾದರಿಯಿಂದ ಹೊಸ ಪ್ರತಿಭೆಗಳ ಶೋಧಕ್ಕೆ ಹೆಚ್ಚಿನ ನೆರವು ಸಿಗುತ್ತದೆ. ಟ್ವೆಂಟಿ-20 ಮಾದರಿ ಸಹ ಇದಕ್ಕೆ ನೆರವಾಗಲಿದೆ. ಆದ್ದರಿಂದ ಇದೇ ಮಾದರಿ ಸೂಕ್ತ ಎನ್ನುವುದು ಗಂಗೂಲಿ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry