ಈಗ ಪ್ರತಿ ದಿನ 200 ಎಸ್‌ಎಂಎಸ್.!

7

ಈಗ ಪ್ರತಿ ದಿನ 200 ಎಸ್‌ಎಂಎಸ್.!

Published:
Updated:
ಈಗ ಪ್ರತಿ ದಿನ 200 ಎಸ್‌ಎಂಎಸ್.!

ನವದೆಹಲಿ (ಪಿಟಿಐ): ಇನ್ನು ಮುಂದೆ  ಮೊಬೈಲ್ ಗ್ರಾಹಕರು ದಿನವೊಂದಕ್ಕೆ ಗರಿಷ್ಠ 200 ಎಸ್‌ಎಂಎಸ್‌ಗಳನ್ನು ತಮ್ಮ ಮೊಬೈಲ್‌ನಿಂದ  ಕಳುಹಿಸಬಹುದು.ಅನಪೇಕ್ಷಿತ ಕರೆ ನಿಷೇಧದ ಜತೆಯಲ್ಲೇ ಜಾರಿಗೊಳಿಸಲಾಗಿದ್ದ 100 ಎಸ್‌ಎಂಎಸ್‌ಗಳ ಮಿತಿಯನ್ನು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ  (ಟ್ರಾಯ್)  ಸೋಮವಾರದಿಂದಲೇ ಜಾರಿಗೆ ಬರುವಂತೆ  200ಕ್ಕೆ ವಿಸ್ತರಿಸಿದೆ.ಕೆಲವು ಗ್ರಾಹಕರು ಮತ್ತು ದೂರವಾಣಿ ಸೇವಾ ಸಂಸ್ಥೆಗಳಿಂದ ಎಸ್‌ಎಂಎಸ್ ಮಿತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ  ಹಿನ್ನೆಲೆಯಲ್ಲಿ, `ಟ್ರಾಯ್~ ಈ ಸಡಿಲಿಕೆ ಪ್ರಕಟಿಸಿದೆ. ಇನ್ನು ಮುಂದೆ ಚಂದಾದಾರರು ಒಂದು ಸಿಮ್‌ನಿಂದ 12 ಗಂಟೆಗಳ ಅವಧಿಯಲ್ಲಿ 200 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದು ಎಂದು ಸ್ಪಷ್ಟಪಡಿಸಿದೆ. ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದೆ, ಅಕ್ರಮವಾಗಿ ವಾಣಿಜ್ಯ `ಎಸ್‌ಎಂಎಸ್~ಗಳನ್ನು ಕಳುಹಿಸುತ್ತಿದ್ದ ಟೆಲಿ ಮಾರುಕಟ್ಟೆ ಕಂಪೆನಿಗಳ ಹಾವಳಿ ತಡೆಯಲು `ಎಸ್‌ಎಂಎಸ್~ ಮಿತಿ ಹೇರಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry